12:13 AM Saturday 23 - August 2025

ದಮ್ಮಪ್ರಿಯ  ಬಹಳ ನಿಷ್ಟೂರವಾದಿ, ಲೆಕ್ಕದಲ್ಲೂ ಬಹಳ ಶಿಸ್ತಿನ ವ್ಯಕ್ತಿ: ಅವರ ಬಡವರ ಬಿನ್ನಪವ ಕೇಳುವರಾರು? ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ಹೆಚ್.ತುಕಾರಾಂ

dammapriya
21/07/2023

ಬೆಂಗಳೂರು: ದಮ್ಮಪ್ರಿಯ ಅವರ ಬಡವರ ಬಿನ್ನಪವ ಕೇಳುವರಾರು? ಪುಸ್ತಕ ಬಿಡುಗಡೆ ಸಮಾರಂಭವು ಜುಲೈ 15ರಂದು ವಾಸುದೇವ ಸಭಾಂಗಣದಲ್ಲಿ ನೆರವೇರಿತು.

ಅತಿಥಿಗಳಾಗಿ ಆಗಮಿಸಿದ್ದ  ಎಲ್.ಎನ್.ಮುಕುಂದರಾಜ್ ಮಾತನಾಡಿ, ಸಮಾಜದಲ್ಲಿನ ಅಸಮಾನತೆಯನ್ನು ತೊಳೆಯಲು  ಇಂತಹ ಲೇಖನಗಳು ಮತ್ತು ಲೇಖಕರ ಪಾತ್ರ ಬಹಳ ಮುಖ್ಯವಾದದ್ದು ಎಂದು  ಹೇಳಿದರು.

ಇದೆ ಸಂದರ್ಭದಲ್ಲಿ  ಬೆಂಗಳೂರು ವಿಶ್ವ ವಿದ್ಯಾಲಯದ  ಸಂಸ್ಕೃತ ವಿಭಾಗದ  ಅಧ್ಯಕ್ಷರಾದ  ಡಾ.ಸಿ.ಶಿವರಾಜು ಮಾತನಾಡಿ,  ದಮ್ಮಪ್ರಿಯ ಲೇಖನಗಳನ್ನು ಬರೆಯಲು ಬಹಳ ಸ್ಪೂರ್ತಿ ನೀಡಿದ್ದು ಬಹುಜನ ಚಳುವಳಿಯ ಸಿದ್ಧಾಂತಗಳು ಅವರಲ್ಲಿ  ಬೇರೂರಿರುವುದು ಎಂದು ತಿಳಿಸಿದರು.

ಸಿದ್ಧಾಂತಗಳು ಜನರನ್ನು ಸದಾ ಜಾಗರೂಕರನ್ನಾಗಿ ಮಾಡಿಸುತ್ತವೆ ಮತ್ತು ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸುತ್ತವೆ. ಈ ಸಿದ್ಧಾಂತಗಳು ಬುದ್ಧ ಮತ್ತು ಬಾಬಾಸಾಹೇಬರ ಸಮಾನತೆಯ ಸಿದ್ಧಾಂತಗಳು.  ಆ ದಾರಿಯಲ್ಲಿ ಲೇಖಕರು ಸಮಾಜವನ್ನು ನೋಡಿದ್ದಾರೆ ಎಂದರು.

ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ  ಡಾ.ಹೆಚ್ ತುಕಾರಾಂ ರವರು ಮಾತನಾಡಿ  ದಮ್ಮಪ್ರಿಯ  ಬಹಳ ನಿಷ್ಟೂರವಾದಿ ಮತ್ತು  ಲೆಕ್ಕದಲ್ಲೂ ಬಹಳ ಶಿಸ್ತಿನ ವ್ಯಕ್ತಿಯಾಗಿದ್ದಾರೆ,  ಬ್ಯಾಂಕ್ ನೌಕರನಾಗಿ ಸಾಹಿತ್ಯ ಬರವಣಿಗೆಯಲ್ಲಿ ಇವರ ಪಾತ್ರ ಬಹಳ ವಿಶೇಷವಾದದ್ದು ಎಂದು  ಪುಸ್ತಕಕ್ಕೆ ಮತ್ತು ಲೇಖಕರಿಗೆ ಶುಭಾಶಯ ಕೋರಿದರು.

ಇದೇ ಸಂದರ್ಭದಲ್ಲಿ  ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರದೀಪ್ ರಾಮವತ್  ಹಾಗೂ  ಎಂ ಇ ಎಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಎಂ.ರಾಮಕೃಷ್ಣಯ್ಯ  ಶುಭಾಶಯ ಕೋರಿದರು.

ಲೇಖಕರಾದ ದಮ್ಮಪ್ರಿಯ ಮಾತನಾಡಿ ತಾನು ಪ್ರತ್ಯಕ್ಷವಾಗಿ ಕಂಡಂತಹ ಅಂಕಿ ಅಂಶಗಳ ಆದರದ ಮೇಲೆ ಲೇಖನಗಳನ್ನು ಹಾಗೂ ಪ್ರಸ್ತುತ ಘಟನೆಗಳನ್ನು ಕುರಿತು ಬರೆಯಲಾಗಿದೆ ಎಂದು ಮಾತನಾಡಿ  ಸಭೆಗೆ ವಿರಾಮವನ್ನಿಟ್ಟರು.

ಇದೆ ಸಂದರ್ಭದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ  ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ  ಅಧ್ಯಕ್ಷರಾದ  ಉದಂತ ಶಿವಕುಮಾರ್,   ಡಾ.ಸಿ.ಶಿವರಾಜ್  ರವರಿಗೆ  ಶಿಕ್ಷಣರತ್ನ  ಪ್ರಶಸ್ತಿಯನ್ನು ನೀಡಿ ಗೌರವಿಸಿದರು.  ಹಾಗು ಗಾನಮಾಧುರ್ಯ ಸಾಂಸ್ಕೃತಿಕ ಕಲಾ ಸಂಘದ ಎಲ್ಲಾ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version