ಬಜಪೆ: ದಾದಾ ಸಾಹೇಬ್ ಕಾನ್ಸಿರಾಮ್’ರವರ ಪುಣ್ಯ ಸ್ಮರಣೆ
10/10/2023
ಬಜಪೆ: ಬಹುಜನ ಸಮಾಜ ಪಾರ್ಟಿ(BSP) ಜಿಲ್ಲಾ ಘಟಕದ ಜಿಲ್ಲಾ ವತಿಯಿಂದ ಪೇಜಾವರ ಅಂಬೇಡ್ಕರ್ ಭವನ ದಲ್ಲಿ BSP ಸಂಸ್ಥಾಪಕರಾದ ದಾದಾ ಸಾಹೇಬ್ ಕಾನ್ಸಿರಾಮ್ ರವರ 17ನೇ ಪುಣ್ಯ ಸ್ಮರಣೆ ನಡೆಯಿತು.


ಜಿಲ್ಲಾ ಅಧ್ಯಕ್ಷರಾದ ದೇವಪ್ಪ ಬೋಧಿ ಅಧ್ಯಕ್ಷತೆ ಯನ್ನು ವಹಿಸಿದರು, ಬೌದ್ಧ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಎಂ. ವಿ. ಪದ್ಮನಾಭ ಮತ್ತು BSP ದ. ಕ ಜಿಲ್ಲಾ ಉಸ್ತುವಾರಿ ಗೋಪಾಲ್ ಮುತ್ತೂರು, ಜಿಲ್ಲಾ ಸಂಯೋಜಕರಾದ ನಾರಾಯಣ ಬೋಧಿ, ಪದ್ಮನಾಭ ಪೇಜಾವರ, ವಿಠ್ಠಲ್ ಕುಂದರ್, ರಾಕೇಶ್ ಕುಂದರ್, ನಿತಿನ್ ಮುತ್ತೂರು, ಜನಾರ್ಧನ್ ಪೇಜಾವರ, ಉಪಸ್ಥಿತರಿದ್ದರು. ಸಂಗೀತ ಬೋದ್ ಕಾರ್ಯಕ್ರಮ ನಿರೂಪಿಸಿದರು.

























