6:25 PM Thursday 16 - October 2025

ಬಾಲಕಿಗೆ ತಾಳಿ ಕಟ್ಟಿ ಸಂಸಾರ ನಡೆಸಿದ ಯುವಕನ ಬಂಧನ

thali
31/01/2022

ಚಾಮರಾಜನಗರ: 16 ವರ್ಷದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಕರೆದೊಯ್ದು ತಾಳಿ ಕಟ್ಟಿ 3 ದಿನ ಸಂಸಾರ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದ ಮಹೇಂದ್ರ (21) ಬಂಧಿತ ಆರೋಪಿ. ನಾಲ್ಕು ದಿನಗಳ ಹಿಂದೆ ಮಹೇಂದ್ರ 16 ವರ್ಷದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ತಮಿಳುನಾಡಿಗೆ ಕರೆದೊಯ್ದು ಅಲ್ಲೇ ಮನೆ ಮಾಡಿ, ಮನೆಯಲ್ಲೇ ತಾಳಿ ಕಟ್ಟಿದ್ದಾನೆ. ಮೂರು ದಿನಗಳ ಕಾಲ ಬಾಲಕಿಯನ್ನು ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.

ಬೇಗೂರು ಪಿಎಸ್ಐ ರಾಜೇಂದ್ರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದು ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಸೇರಿಸಲಾಗಿದೆ. ಬಾಲಕಿಯನ್ನು ಕರೆದೊಯ್ದಿದ್ದ ಬಗ್ಗೆ ಸಂತ್ರಸ್ತೆ ತಂದೆ ಬೇಗೂರು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

60 ಅಂತಸ್ತಿನ ಕಟ್ಟಡದಿಂದ ಬಿದ್ದ ಮಿಸ್ ಯು ಎಸ್ ಎ

ದುರಹಂಕಾರಿ ಸಚಿವರನ್ನು ಕೈಬಿಡಿ: ಎಂ.ಪಿ.ರೇಣುಕಾಚಾರ್ಯ 

ಅಪ್ರಾಪ್ತೆ ಮೇಲೆ ವೃದ್ಧನಿಂದ ಅತ್ಯಾಚಾರಕ್ಕೆ ಯತ್ನ

ಕಾರು ಚಲಾಯಿಸಿದ ಬಾಲಕ: ಫುಟ್ಪಾತ್ ನಲ್ಲಿ ಕುಳಿತಿದ್ದ ನಾಲ್ವರು ಮಹಿಳೆಯರ ದಾರುಣ ಸಾವು

ನಿಜವಾದ ಹಿಂದುತ್ವವಾದಿಗಳಾಗಿದ್ದರೆ ಜಿನ್ನಾನ ಕೊಲೆ ಮಾಡಬೇಕಿತ್ತು, ಗಾಂಧಿಯನ್ನಲ್ಲ | ಬಿ.ಕೆ.ಹರಿಪ್ರಸಾದ್

 

ಇತ್ತೀಚಿನ ಸುದ್ದಿ

Exit mobile version