ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಿಕ್ಕೆ ಬಳೆ ವ್ಯಾಪಾರಿಯ ಕತ್ತು ಸೀಳಿ ಬರ್ಬರ ಕೊಲೆ

ಯಾದಗಿರಿ(ಸುರಪುರ) : ಕುತ್ತಿಗೆ ಕುಯ್ದು ಬಳೆ ವ್ಯಾಪಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಜಗದ್ಗುರು ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಬೆಳಗಾವಿಯ ಅಥಣಿ ಮೂಲದ ಬಳೆ ವ್ಯಾಪಾರಿ ಮಲ್ಲಪ್ಪ (38) ಕೊಲೆಯಾದ ದುರ್ದೈವಿ. ತಿಂಥಣಿ ಗ್ರಾಮದಲ್ಲಿ ಮೌನೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಬಳೆ ಅಂಗಡಿ ಹಾಕಿದ್ದ. ಈತನ ಅಂಗಡಿ ಪಕ್ಕದಲ್ಲೇ ಬಾಗಲಕೋಟೆಯ ಜಮಖಂಡಿ ಮೂಲದ ಬುರ್ರಾನ್ ಸಾಬ್ ಎಂಬುವವರು ಬಳೆ ಅಂಗಡಿ ಹಾಕಿದ್ದ. ಈ ವೇಳೆ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿದೆ. ಆಗ ಬುರ್ರಾನ್ ತನ್ನ ಪತ್ನಿ ಬಗ್ಗೆ ಮಲ್ಲಪ್ಪ ಕೆಟ್ಟದಾಗಿ ಮಾತನಾಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ .
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಟಿ ಪರಿಶೀಲನೆ ನಡೆಸಿದ್ದಾರೆ. ಬಳೆ ವ್ಯಾಪಾರಿಯ ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೊಲೆ ಮಾಡಿರುವ ಆರೋಪಿ ಬುರ್ರಾನ್ ನನ್ನು ಸುರಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth