1:11 PM Wednesday 27 - August 2025

ಬರ್ತ್ ಡೇ ಪಾರ್ಟಿ ವೇಳೆ ಕ್ಯಾಮರಾ ಬ್ಯಾಟರಿ ಖಾಲಿ: ಛಾಯಾಗ್ರಾಹಕನನ್ನು ಗುಂಡಿಕ್ಕಿ ಹತ್ಯೆ

02/03/2024

ಬಿಹಾರದ ದರ್ಭಾಂಗದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯ ವೇಳೆ ಕ್ಯಾಮರಾದ ಬ್ಯಾಟರಿ ಖಾಲಿಯಾದ ಕಾರಣ ಛಾಯಾಗ್ರಾಹಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಆರೋಪಿಯನ್ನು ರಾಕೇಶ್ ಸಾಹ್ನಿ ಎಂದು ಗುರುತಿಸಲಾಗಿದ್ದು, ಕ್ಯಾಮೆರಾಮನ್ ಸೇವೆಯ ಬಗ್ಗೆ ಅತೃಪ್ತಿ ಹೊಂದಿದ್ದ ಆರೋಪಿ ರಾಕೇಶ್ ಸಾಹ್ನಿಯು ಕ್ಯಾಮೆರಾದ ಬ್ಯಾಟರಿ ಕಡಿಮೆ ಇದೆ ಎಂದು ಹೇಳಿದ್ದಕ್ಕೆ ಹತ್ಯೆ ಮಾಡಿದ್ದಾನೆ.
ದರ್ಭಾಂಗ ಜಿಲ್ಲೆಯ ಬಹೇಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮಖ್ನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಶೀಲ್ ತನ್ನ ಕ್ಯಾಮೆರಾದ ಬ್ಯಾಟರಿಯನ್ನು ಚಾರ್ಜ್ ಮಾಡಲು ತನ್ನ ಮನೆಗೆ ಹೋಗಿದ್ದ ಎಂದು ಹೇಳಲಾಗಿದೆ.

ಛಾಯಾಗ್ರಾಹಕ ಸುಶೀಲ್ ಸಾಹ್ನಿ ಕಣ್ಮರೆಯಾದ ನಂತರ ಆರೋಪಿ ರಾಕೇಶ್ ಸಾಹ್ನಿ ಆತನನ್ನು ಮೊಬೈಲ್ ಕರೆ ಮೂಲಕ ಸಂಪರ್ಕಿಸಿ ಬ್ಯಾಟರಿಯನ್ನು ಚಾರ್ಜ್ ಮಾಡಿದ ನಂತರ ಪಾರ್ಟಿಗೆ ಬೇಗ ಬರುವಂತೆ ಬೈದಿದ್ದ.

ಆತ ಬಂದಾಗ ಅಷ್ಟೊತ್ತಿಗಾಗಲೇ ಇಬ್ಬರ ನಡುವೆ ಜಗಳ ಶುರುವಾಗಿದ್ದು, ವಾಗ್ವಾದದ ನಡುವೆಯೇ ಇಬ್ಬರೂ ಘಟನಾ ಸ್ಥಳದಲ್ಲಿ ಜಗಳಕ್ಕೆ ಇಳಿದಿದ್ದರು. ಆಗ ರಾಕೇಶ್ ಸಾಹ್ನಿ ತನ್ನ ಕುಟುಂಬ ಸದಸ್ಯರೊಂದಿಗೆ ಕೋಪಗೊಂಡು ಕ್ಯಾಮರಮೆನ್ ಸುಶೀಲ್ ಅವರ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದ್ದಾನೆ. ಅಲ್ಲದೇ ಆರೋಪಿಗಳು ಸಂತ್ರಸ್ತನನ್ನು ದರ್ಭಂಗಾ ಡಿಎಂಸಿಎಚ್ ಆಸ್ಪತ್ರೆಯ ಗೇಟ್ ಗೆ ಕರೆದೊಯ್ದು ಸ್ಥಳದಿಂದ ಪರಾರಿಯಾಗಿದ್ದಾರೆ.

ಆರೋಪಿಯ ಇಡೀ ಕುಟುಂಬವು ದೊಡ್ಡದಾಗಿದೆ. ಗ್ರಾಮದ ಮುಖ್ಯಸ್ಥರ ಪ್ರಕಾರ, ಆರೋಪಿ ರಾಕೇಶ್ ಸಾಹ್ನಿ ಅಕ್ರಮ ಮದ್ಯ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಅಲ್ಲಿ ಎರಡು ಖಾಲಿ ಕಾರ್ ಟ್ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಸಮಗ್ರ ತನಿಖೆ ನಡೆಯುತ್ತಿದೆ ಎಂದು ದರ್ಭಾಂಗದ ಎಸ್ಎಸ್ಪಿ ಜಗನ್ನಾಥ್ ರೆಡ್ಡಿ ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version