10:03 AM Thursday 21 - August 2025

ಸ್ವತಂತ್ರದ ಸಂಭ್ರಮದ ನಡುವೆ ಬಿಸಿಯೂಟ ಕಾರ್ಮಿಕರ ಶೋಷಿಸುತ್ತಿರುವ ಸರಕಾರ: ಬಿ.ಎಂ.ಭಟ್

akshara dasaoha
16/08/2022

ಶಾಲಾ ಮಕ್ಕಳಿಗೆ ಅಡುಗೆ ಮಾಡಿ ಬಿಸಿಯೂಟ ಬಡಿಸುವ ಕೆಲಸ ಮಾಡುವ ಮಾತೆಯರನ್ನ ಸಂಬಳ ನೀಡದೆ ದುಡಿಸುವ ಸರಕಾರದ ಸ್ವತಂತ್ರ್ಯದ ಅಮೃತ ಮಹೋತ್ಸವದ ಕೊಡುಗೆಯೇ? ಎಂದು ಕಾರ್ಮಿಕ ನಾಯಕ ಬಿ.ಎಂ.ಭಟ್ ಪ್ರಶ್ನಿಸಿದರು.

ಬೆಳ್ತಂಗಡಿ ತಾಲೂಕು ಅಕ್ಷರ ದಾಸೋಹ ನೌಕರರ ಸಂಘಟನೆಯ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನ ಸೌಧ ಎದುರು ನಡೆದ ಬಿಸಿಯೂಟ ನೌಕರರ ಹೋರಾಟವನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು. ಮೊದಲೇ ಬದುಕಲು ತಕ್ಕ ಸಂಬಳ ನೀಡದ ಸರಕಾರ ನೀಡುವ 3,500 ರೂ. ಮಾಸಿಕ ಸಂಬಳವನ್ನೂ ಕಳೆದ 3 ತಿಂಗಳಿಂದ ನೀಡದೆ ಬಿಸಿಯೂಟ ಕಾರ್ಮಿಕರ ದುಡಿಸುವ ಸರಕಾರ ನಡೆ ಖಂಡನೀಯ ಎಂದವರು ಹೇಳಿದರು.

ಸರಕಾರದ ಬಳಿ ಕೇಳಿದರೆ ಹಣ ಇಲ್ಲ ಎನ್ನುವ ಸರಕಾರಕ್ಕೆ ಕಮೀಷನ್ ಧಂಧೆಗೆ, ದುಂದುವೆಚ್ಚಗಳಿಗೆ ಶಾಸಕರ ಸಂಬಳಗಳಿಗೆ ಹಣ ಇರುವಾಗ ಬಡ ತಾಯಂದಿರಿಗೆ ಹಣ ಇಲ್ಲ ಎನ್ನುತ್ತಾ ಜೀತದಾಳುಗಳಂತೆ ದುಡಿಸುವುದನ್ನು ಖಂಡಿಸುತ್ತೇವೆ . ಬಿಸಿಯೂಟ ನೌಕರರಿಗೆ ತಕ್ಷಣ ದುಡಿದ ವೇತನ ನೀಡಿ, ಮಾಸಿಕ ವೇತನ ಕನಿಷ್ಟ 10,000 ನೀಡಬೇಕು ಹಾಗೂ ತಿಂಗಳ ಮೊದಲ ದಿನ ನೀಡಬೇಕು ಎಂದವರು ಹೇಳಿದರು.

60 ವರ್ಷ ಆಗಿದೆ ಎಂದು ಬಡ ತಾಯಂದಿರ ಕಡ್ಡಾಯ ನಿವೃತ್ತಿಗೊಳಿಸಿದ ಸರಕಾರ ಅವರಿಗೆ ಕನಿಷ್ಟ ಪರಿಹಾರವನ್ನಾಗಲಿ ಪಿಂಚಿಣಿಯನ್ನಾಗಲಿ ನೀಡದೆ ಬೀದಿಗೆ ತಳ್ಳಿದೆ. ಮಾತೆ ಮಾತೆ ಎನ್ನುವ ಬಿಜೆಪಿ ತನ್ನ ಮಾತು ಉಳಿಸಲಾದರೂ ಅವರಿಗೆ ಪರಿಹಾರ ಪಿಂಚಿಣಿ ಒದಗಿಸಬೇಕು ಎಂದರು.

ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಿ ಬಳಿಕ ಮೆರವಣಿಗೆಯಿಂದ ತಾಲೂಕು ಪಂಚಾಯತಿಗೆ ತೆರಳಿ ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ಧಶಕರ ಮೂಲಕವೂ ಸರಕಾರಕ್ಕೆ ಮನವಿ ನೀಡಿದರು.

ಮೊದಲಿಗೆ ಕಾರ್ಮಿಕ ನಾಯಕಿ ಜಯಶ್ರೀ ಸ್ವಾಗತಿಸಿ ಕೊನೆಗೆ ಕಾರ್ಯದರ್ಶಿ ಜಾನಕಿ ವಂದಿಸಿದರು. ಹೋರಾಟದಲ್ಲಿ ಂಘಟದ ಅದ್ಯಕ್ಷರಾದ ಬಾಲಕಿ, ಉಪಾದ್ಯಕ್ಷರಾದ ಶ್ಯಾಮಲ, ಸಹಕಾರ್ಯದರ್ಶಿ ಸುಂದರಿ, ಖಜಾಂಜಿ ಹೇಮ, ಕ್ಲೆಸ್ಟರ್ ಮುಖಂಡರಾದ ವಾರಿಜ, ಜಾನಕಿ ಬಂಗಾಡಿ, ಗೀತ ಕಾಯರ್ತಡ್ಕ, ಪದ್ಮಾವತಿ, ವೇದಾವತಿ, ಕಾರ್ಮಿಕ ಮುಖಂಡರುಗಳಾದ ಜಯರಾಮ ಮಯ್ಯ, ನೆಬಿಸಾ, ಭವ್ಯ, ರಾಮಚಂದ್ರ, ಲಾರೆನ್ಸ್, ಮೊದಲಾದವರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version