ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ

kota
13/06/2023

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ವಿದ್ಯುತ್ ದರ ಏರಿಕೆ ಮಾಡಿಲ್ಲ ಅಂತ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸಚಿವರ ಆರೋಪಕ್ಕೆ ವಿಧಾನಸೌಧದಲ್ಲಿ ಮಾತನಾಡಿದ ಅವರು ತಿರುಗೇಟು ನೀಡಿದರು

ಜನವರಿಯಲ್ಲಿ ಸಹಜವಾಗಿ ಕೆಇಆರ್ ಸಿ ಬೆಲೆ ಏರಿಕೆ ಪ್ರಸ್ತಾಪ ಇಡುತ್ತೆ. ಆದರೆ ನನ್ನ ಮಾಹಿತಿ ಪ್ರಕಾರ ನಮ್ಮ ಸರ್ಕಾರ ಹೆಚ್ಚಳ ಮಾಡಿಲ್ಲ. ಒಂದು ವೇಳೆ ಹೆಚ್ಚಳ ಆಗಿದ್ದರೂ ಈಗ ನೀವು ವಾಪಸ್ ಪಡೆದುಕೊಳ್ಳಬೇಕು. ಕೆಇಆರ್ ಸಿ  ಏನು ಸುಪ್ರೀಂಕೋರ್ಟ್ ಅಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಬಾರದು ಅಂತ ಕೋಟಾ ಆಗ್ರಹಿಸಿದರು.

ಪ್ರತಿ ಯುನಿಟ್‍ಗೆ 70 ಪೈಸೆ ದರ ಹೆಚ್ಚಳ ಮಾಡಿದ್ದೀರಿ. ಕೈಗಾರಿಕೆಗಳು ನಿಲ್ಲಿಸೋ ಬಗ್ಗೆ ಸಂಘದವರು ಮಾತಾಡಿದ್ದಾರೆ. ಇದನ್ನ ಸರಿ ಮಾಡೋ ಕೆಲಸ ಸರ್ಕಾರ ಮಾಡಬೇಕು ಅಂತ ಆಗ್ರಹ ಮಾಡಿದರು.  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಅವರು ಪ್ರತಿ ವರ್ಷ ದರ ಏರಿಕೆಗೆ ಪ್ರಸ್ತಾಪ ಮಾಡುತ್ತಾರೆ. ಆದರೆ ನಮ್ಮ ಸರ್ಕಾರ ಅದನ್ನ ಒಪ್ಪಿರಲಿಲ್ಲ. ಈಗ ಹೆಚ್ಚಳ ಮಾಡಿರೋ ವಿದ್ಯುತ್ ದರ ಏರಿಕೆ ಕಡಿಮೆ ಮಾಡಿ ಅಂತ ಒತ್ತಾಯ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version