ತಾಯಿಯನ್ನು ಕೊಂದು ಮೃತದೇಹ ಸೂಟ್ ಕೇಸ್ ನಲ್ಲಿಟ್ಟು ಠಾಣೆಗೆ ತಂದ ಮಗಳು

ಬೆಂಗಳೂರು: ಯುವತಿಯೊಬ್ಬಳು ತಾಯಿಯನ್ನು ಹತ್ಯೆಗೈದು ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು ನಗರದ ಮೈಕೋಲೇಔಟ್ ಪೊಲೀಸ್ ಠಾಣೆಗೆ ತಂದಿರುವ ಘಟನೆಯೊಂದು ಮಂಗಳವಾರ ಬೆಳಗ್ಗೆ ವರದಿಯಾಗಿದೆ.
ಸೆನಾಲಿ ಸೇನ್(39) ಕೊಲೆ ಆರೋಪಿಯಾಗಿದ್ದು, ಬೀವಾ ಪಾಲ್ (70) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಇವರು ಮೂಲತಃ ಕೊಲ್ಕತ್ತಾ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಬಿಳೇಕಹಳ್ಳಿಯ ಎನ್ಎಸ್‌ಆರ್ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಫ್ಲ್ಯಾಟ್‌ನಲ್ಲಿ ಪುತ್ರಿ ಸೆನಾಲಿ ಸೇನ್, ತಾಯಿ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ವಾಸವಿದ್ದರು. ನಿತ್ಯ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ನಡುವೆ ಜಗಳವಾಗುತ್ತಿತ್ತು. ಇದರಿಂದ ಮನನೊಂದು ಈ ಕೃತ್ಯವೆಸಗಿರುವುದಾಗಿ ಆಕೆ ಪೊಲೀಸರ ಬಳಿ ಹೇಳಿದ್ದಾಳೆ.
ತಾಯಿಗೆ ಮೊದಲು ನಿದ್ರೆ ಮಾತ್ರೆ ನೀಡಿದ್ದು, ಹೊಟ್ಟೆ ನೋವು ಆರಂಭಿಸಿದಾಗ ವೇಲ್‌ನಿಂದ ಕತ್ತನ್ನು ಹಿಸುಕಿ ಕೊಂದಿದ್ದಾಳೆ ಎನ್ನಲಾಗಿದೆ.ಈ ಸಂಬಂಧ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw