12:58 PM Saturday 23 - August 2025

ಬಿಜೆಪಿ ಶಾಸಕನ ಮೇಲೆ ಅತ್ಯಾಚಾರ ಪ್ರಕರಣ | ತನಿಖೆ ವರ್ಗಾವಣೆ

18/11/2020

ಡೆಹ್ರಾಡೂನ್‌: ಬಿಜೆಪಿ ಶಾಸಕನ ಮೇಲೆ ಅತ್ಯಾಚಾರದ ಕೇಸು ದಾಖಲಾದ ಬಳಿಕ ತನಿಖೆಯನ್ನು ಇನ್ನೊಂದು ಜಿಲ್ಲೆಗೆ ವರ್ಗಾಯಿಸಿರುವ ಘಟನೆ ನಡೆದಿದ್ದು,  ಪಾರ ದರ್ಶಕ ತನಿಖೆ ನಡೆಯಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ.

ಉತ್ತರಾಖಂಡ ರಾಜ್ಯದ ದ್ವಾರಹತ್‌ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್‌ ನೇಗಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಸೂಕ್ತ ಪಾರದರ್ಶಕ ತನಿಖೆಗಾಗಿ ಅತ್ಯಾಚಾರ ಪ್ರಕರಣ ಹಾಗೂ ಮಹಿಳೆಗೆ ಬೆದರಿಕೆ ಈ ಎರಡೂ ಪ್ರಕರಣಗಳನ್ನು ಪೌರಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ ಎಂದು ಐಜಿಪಿ ಅಭಿನವ್‌ ಕುಮಾರ್‌ ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ನೇಗಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಮಹಿಳೆ, ನೇಗಿ ಅವರು ಕೊಲೆ ಬೆದರಿಕೆ ಒಡ್ಡಿದ್ದರು ಎಂದೂ ಆರೋಪಿಸಿದ್ದರು.  ನನ್ನ ಮಗುವಿನ ತಂದೆ ನೇಗಿಯಾಗಿದ್ದು, ಡಿಎನ್‌ ಎ ಪರೀಕ್ಷೆ ನಡೆಸಬೇಕು  ಎಂದು ಆಗ್ರಹಿಸಿದ್ದರು

ಇತ್ತೀಚಿನ ಸುದ್ದಿ

Exit mobile version