ಸ್ಫೋಟಕ ಮಾಹಿತಿ: ರಾಜಕೀಯ ಜಾಹೀರಾತುಗಳಿಗೆ 30 ದಿನಗಳಲ್ಲಿ 30 ಕೋಟಿ ವೆಚ್ಚ ಮಾಡಿದ ಬಿಜೆಪಿ

04/03/2024

ಬಿಜೆಪಿಯು 2024ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಗೂಗಲ್ ಸರ್ಚ್ ಮತ್ತು ಯೂಟ್ಯೂಬ್ ಸೇರಿದಂತೆ ಗೂಗಲ್‌ನ ಡಿಸ್‌ಪ್ಲೇ ನೆಟ್‌ವರ್ಕ್ ಮತ್ತು ಆಲ್ಫಾಬೆಟ್ ಪ್ಲಾಟ್‌ಫಾರ್ಮ್‌ಗಳಿಗೆ ಸಾವಿರಾರು ರಾಜಕೀಯ ಜಾಹೀರಾತುಗಳಿಗೆ 30 ದಿನಗಳಲ್ಲಿ 30 ಕೋಟಿ ರೂಪಾಯಿ ವೆಚ್ಚವನ್ನು ಮಾಡಿದೆ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.

2019ರ ಚುನಾವಣೆಯ ವೇಳೆ ಫೆಬ್ರವರಿಯಿಂದ- ಮೇವರೆಗೆ ನಾಲ್ಕು ತಿಂಗಳುಗಳ ನಡುವೆ ಜಾಹೀರಾತಿಗಾಗಿ ಮಾಡಿದ ವೆಚ್ಚಕ್ಕಿಂತ ಇದು ದುಪ್ಪಟ್ಟಾಗಿದೆ. 2019ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ನಾಲ್ಕು ತಿಂಗಳ ಅವಧಿಯಲ್ಲಿ ಪಕ್ಷವು ಕೇವಲ 12.3 ಕೋಟಿ ರೂ.ವೆಚ್ಚವನ್ನು ಮಾಡಿತ್ತು. ಅದೇ ಅವಧಿಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವೆಚ್ಚ 2.99 ಕೋಟಿ ರೂ.ಆಗಿತ್ತು. ಫೆಬ್ರವರಿ 2024ರಲ್ಲಿ ಕಾಂಗ್ರೆಸ್‌ ಪಕ್ಷವು ಗೂಗಲ್ ಜಾಹೀರಾತುಗಳ ಮೂಲಕ ಯಾವುದೇ ಸಂದೇಶವನ್ನು ಪ್ರಚಾರ ಮಾಡಿಲ್ಲ ಎನ್ನುವುದು ತಿಳಿಯುತ್ತದೆ.

30 ದಿನಗಳಲ್ಲಿ ಅಂದರೆ ಜನವರಿ 29ರಿಂದ ಫೆಬ್ರವರಿ 28ರ ನಡುವೆ ಜಾಹೀರಾತಿಗಾಗಿ ಬಿಜೆಪಿ 29.7 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಗೂಗಲ್ ಜಾಹೀರಾತುಗಳ ಕುರಿತ ಡೇಟಾ ತೋರಿಸುತ್ತದೆ. ಗೂಗಲ್‌ 12,600ಕ್ಕೂ ಹೆಚ್ಚು ಜಾಹೀರಾತುಗಳನ್ನು ಸ್ಟ್ರೀಮ್ ಮಾಡಿದೆ. ಹೆಚ್ಚಾಗಿ ವೀಡಿಯೊಗಳನ್ನು ಅಂದರೆ 75%ದಷ್ಟು ವಿಡಿಯೋ ಜಾಹೀರಾತುಗಳನ್ನು ಪ್ರಸಾರ ಮಾಡಿದೆ. ಇದು ಬಹು ಭಾರತೀಯ ಭಾಷೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರವನ್ನು ಮಾಡುತ್ತದೆ. ಇವುಗಳಲ್ಲಿ ಹೆಚ್ಚಿನವು ವೀಡಿಯೊ ಜಾಹೀರಾತುಗಳಾಗಿದ್ದು, 50%ಕ್ಕಿಂತ ಹೆಚ್ಚು ಜಾಹೀರಾತುಗಳನ್ನು ಪ್ಲಾಟ್‌ಫಾರ್ಮ್ ನೀತಿಯ ಉಲ್ಲಂಘನೆಗಾಗಿ ಗೂಗಲ್ ನಿಂದ ತೆಗೆದುಹಾಕಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version