ಬಾಲಕನನ್ನು ಅಪಹರಿಸಿ ಅಸ್ವಾಭಾವಿಕ ಲೈಂಗಿಕ ಕಿರುಕುಳ ನೀಡಿ ಬರ್ಬರ ಹತ್ಯೆ!

crime news
27/02/2024

ಪುಣೆ: ವ್ಯಕ್ತಿಯೊಬ್ಬ 8 ವರ್ಷದ ಬಾಲಕನಿಗೆ ‘ವಡಾ ಪಾವ್’ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆ ಪಿಂಪ್ರಿ ಚಿಂಚ್ವಾಡ್ ಪ್ರದೇಶದಲ್ಲಿ ನಡೆದಿದೆ.

ಪವನ್ ಪಾಂಡೆ(28) ಕೃತ್ಯ ಎಸಗಿದ ಆರೋಪಿಯಾಗಿದ್ದು, ಈತ ಬಾಲಕನನ್ನು ಶನಿವಾರದಂದು ಮನೆಯ ಸಮೀಪದಿಂದ ಅಪಹರಿಸಿದ್ದ. ಬಾಲಕನಿಗೆ ‘ವಡಾ ಪಾವ್’ ನೀಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿ ನಂತರ ಕತ್ತು ಹಿಸುಕಿ ಕೊಲೆ ಮಾಡಿ ಬವಧಾನ್ ಪ್ರದೇಶದಲ್ಲಿ ಎಸೆದಿದ್ದ.

ಆರೋಪಿಯು ಬಾಲಕನನ್ನು ಅಪಹರಿಸಿದ ದೃಶ್ಯ ಸಿಸಿಟಿವಿ ಸೆರೆಯಾಗಿದ್ದು, ಸಿಸಿಟಿವಿಯ ದೃಶ್ಯಾವಳಿಗಳ ಸಹಾಯದಿಂದ ಪೋಲಿಸರು, ಆರೋಪಿಯನ್ನು ಭಾನುವಾರ ಬಂಧಿಸಿರುವುದಾಗಿ ವಕಾಡ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಆರೋಪಿಯ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಅಡಿಯಲ್ಲಿ ಕೊಲೆ, ಅಸ್ವಾಭಾವಿಕ ಲೈಂಗಿಕತೆ ಮತ್ತು ಇತರ ಅಪರಾಧಗಳನ್ನು ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version