3:24 PM Thursday 29 - January 2026

ಗನ್ ಪಾಯಿಂಟ್ ನಲ್ಲಿ ಚರ್ಚೆ ನಡೆಸಲು ನಾವು ಸಿದ್ಧರಿಲ್ಲ | ಕೇಂದ್ರಕ್ಕೆ ರೈತ ಮುಖಂಡ ರಾಕೇಶ್ ಟಿಕೈಟ್

31/01/2021

ನವದೆಹಲಿ: ಕೇಂದ್ರ ಸರ್ಕಾರದ ಗನ್ ಪಾಯಿಂಟ್ ನಲ್ಲಿ ನಾವು ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ಸಾಧ್ಯವಿಲ್ಲ ಎಂದು ರೈತ  ಮುಖಂಡ ರಾಕೇಶ್ ಟಿಕೈಟ್ ಮಾರ್ಮಿಕವಾಗಿ ಹೇಳಿದ್ದಾರೆ.

ಕೃಷಿ ಕಾನೂನು ಸಂಬಂಧ ರೈತರ ಜೊತೆಗೆ ಕೇಂದ್ರ ಸರ್ಕಾರದ ಪ್ರಸ್ತಾವನೆ ಇನ್ನೂ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿಕೆ ನೀಡಿದ ನಂತರ, ಕೇಂದ್ರವು ಪೂರ್ವ ಷರತ್ತುಗಳನ್ನು ವಿಧಿಸದಿದ್ದರೆ ನಾವು ಮಾತುಕತೆಯಲ್ಲಿ ಭಾಗವಹಿಸುತ್ತೇವೆ ಎಂದು ರಾಕೇಶ್ ಹೇಳಿದ್ದಾರೆ.

ಪ್ರಧಾನಿ ಅವರ ಹೇಳಿಕೆಗೆ ಸಂಬಂಧಿಸಿದಂತೆ, ನಾವು ರೈತರ ಸಮಸ್ಯೆಗೆ ಪರಿಹಾರವನ್ನು  ಬಯಸುತ್ತೇವೆ.  ಆದರೆ ನಾವು ಸರ್ಕಾರದ ಗನ್ ಪಾಯಿಂಟ್ ನಲ್ಲಿ ಮಾತುಕತೆಗೆ ಸಿದ್ಧರಿಲ್ಲ.  ಕೇಂದ್ರ ಸರ್ಕಾರ ಷರತ್ತುಗಳನ್ನು ಹಾಕದಿದ್ದಲ್ಲಿ ಮಾತ್ರವೇ ರೈತರು ಮಾತುಕತೆ ನಡೆಸುತ್ತೇವೆ ಎಂದು ರಾಕೇಶ್ ಹೇಳಿದರು.

ಇತ್ತೀಚಿನ ಸುದ್ದಿ

Exit mobile version