ಓವರ್ ಟೇಕ್ ಭರದಲ್ಲಿ ರಿಕ್ಷಾಗೆ ಡಿಕ್ಕಿ ಹೊಡೆದ ಕಾರು: ಯುವತಿಯ ದಾರುಣ ಸಾವು

02/09/2023
ಕುಂದಾಪುರ: ಕಂದಾವರ ಗ್ರಾಮದ ಮೂಡ್ಲಕಟ್ಟೆ ಕಂಬಳಗದ್ದೆ ಸಮೀಪ ಘಟನೆ ಸೆ.1ರಂದು ಮಧ್ಯಾಹ್ನ ಕಾರೊಂದು ಓವರ್ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಅಂಪಾರು ನಿವಾಸಿ ಅಂಬಿಕಾ(22) ಮೃತ ದುದೈರ್ವಿ. ಅಂಬಿಕಾ ಹಾಗೂ ಇತರರು ಕುಂದಾಪುರದ ಸಂಬಂಧಿಕರ ಮನೆಯಿಂದ ಅಂಪಾರಿಗೆ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದು, ಈ ಸಂದರ್ಭ ಎದುರಿನಿಂದ ಬಂದ ಕಾರು ಮತ್ತೊಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು.
ಇದರಿಂದ ಆಟೋ ರಿಕ್ಷಾ ಪಲ್ಟಿಯಾಗಿ ಗಂಭೀರವಾಗಿ ಗಾಯಗೊಂಡ ಅಂಬಿಕಾ ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಅಪಘಾತದಿಂದ ರಿಕ್ಷಾದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.