ಮಿಸೆಸ್ ಇಂಡಿಯಾ ಮಂಗಳೂರು ನಾಲ್ಕನೇ ಆವೃತ್ತಿಯ ಸ್ಪರ್ಧೆ ಮುಗಿದಿದೆ. ಮಿಸೆಸ್ ಇಂಡಿಯಾ ವಿಭಾಗದಲ್ಲಿ ಸೌಮ್ಯಲತಾ, ಸವಿತಾ ಚೇತನ್ ಕುಮಾರ್, ಬಬಿತಾ ನರೇಶ್ ಕಿರೀಟ ಮುಡಿಗೇರಿಸಿಕೊಂಡು ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ದೀಪಕ್ ಗಂಗೊಳ್ಳಿ ತಿಳಿಸಿದರು. ...
ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದು ಚಾಲಕ ಅದೃಷ್ಟವಶಾತ್ ಪಾರಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೊಡಂಗಾಯಿ ಎಂಬಲ್ಲಿ ನಡೆದಿದೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮೇಲಕ್ಕೆದ್ದು, ಕಾರಿನ ಮೇಲೆ ಮುರಿದು ಬಿದ್ದಿದೆ. ಈ ಅವಘಡದಲ್ಲಿ ಚಾಲಕನಿಗೆ ಸಣ್ಣ -ಪುಟ...
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಗಡಿಯಾರ ಸರಕಾರಿ ಶಾಲೆಯ ಬಳಿ ಗುಡ್ಡ ಕುಸಿತ ಉಂಟಾಗಿದೆ. ಇದರಿಂದ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ...
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ. ಅವರು ಬಂಟ್ವಾಳದ ಮೆಲ್ಕಾರ್ನ ಬಿರ್ವ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜನಾರ್ದನ ಪೂಜಾರಿಯವರ...
ಚಿಕ್ಕಮಗಳೂರು: ಬಜರಂಗದಳ ಮುಖಂಡ, ರೌಡಿಶೀಟರ್ ರಘು ಸಕಲೇಶಪುರ ಪ್ರಚೋದನಾಕಾರಿ ಹೇಳಿಕೆ ನೀಡಿ ಇದೀಗ ಪರಾರಿಯಾಗಿದ್ದು, ಆತನ ಸಹಚಾರರಿಗೆ ಸಂಕಷ್ಟ ಎದುರಾಗಿದೆ. ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆ ರಘು ಸಕಲೇಶಪುರ ನಾಪತ್ತೆಯಾಗಿದ್ದ ಇದೀಗ ಈತನ ಪತ್ತೆಗಾಗಿ ಸಖಲೇಶಪುರ ಪೊಲೀಸರು ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಎಂಬ ಯುವಕ...
ತುಮಕೂರು: ಕೆರೆಯಲ್ಲಿ ಮುಳುಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ರಕ್ಷಿಸಿ, ಈಜು ಬಾರದ ತಾಯಿಯೊಬ್ಬಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ನಡೆದಿದೆ. ಮನು(30) ಮೃತ ದುರ್ದೈವಿಯಾಗಿದ್ದಾರೆ. ಇಬ್ಬರು ಮಕ್ಕಳೊಂದಿಗೆ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಸಂದರ್ಭ...
ರಿಕ್ಷಾ ಮತ್ತು ಕಾರು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಮಗುಚಿ ಬಿದ್ದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ರಾತ್ರಿ ನಡೆದಿದೆ. ವಾಹನಗಳಲ್ಲಿ ಇದ್ದವರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ -- ಗುರುವಾಯನಕೆರೆ ರಸ್ತೆಯಲ್ಲಿ ಗುರುವಾಯನಕೆರೆ ಕಡೆಗೆ ಹೋಗುತ್ತಿದ್ದ ರಿಕ್ಷಾವೊಂದು ಉಪ್ಪಿನಂಗಡಿ ಕಡೆ ಬರುತ್ತ...
ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ಮಂಗಳೂರಲ್ಲಿ ನಿಧನರಾಗಿದ್ದ ವಿಶ್ರಾಂತ ಪ್ರಾಧ್ಯಾಪಕ, ಚಿಂತಕ, ಸಾಹಿತ್ಯ ವಿಮರ್ಶಕ, ಮಾನವತಾವಾದಿ ಪಟ್ಟಾಭಿರಾಮ ಸೋಮಯಾಜಿಯವರ ಅಂತ್ಯಕ್ರಿಯೆಯು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಕೂರಾಡಿಯಲ್ಲಿ ನಡೆಯಿತು. ಪಟ್ಟಾಭಿರಾಮ ಸೋಮಯಾಜಿಯವರ ಅಕ್ಕ ಅನಸೂಯ ಕಲ್ಕೂರರವರ ಮನೆಯ ವಠಾರದಲ್ಲಿ ನಡೆದ ಅಂತ್ಯಕ್ರಿಯೆಯಲ್...
ಉಡುಪಿ: ಇಂದಿನಿಂದ ನಾಲ್ಕು ಹುಣ್ಣಿಮೆಗಳಲ್ಲಿ ಸೂಪರ್ ಮೂನ್ ಸರಮಾಲೆಗಳನ್ನೇ ನೋಡಬಹುದು. ಜುಲೈ 3, ಆಗಸ್ಟ್ 1, ಆಗಸ್ಟ್ 31, ಹಾಗೂ ಸೆ.29ರ ಎಲ್ಲ ಹಣ್ಣಿಮೆಗಳು ಕೂಡ ಸೂಪರ್ ಮೂನ್ ಗಳೇ ಆಗಿರುತ್ತದೆ. ಸೂಪರ್ಮೂನ್ ಅಂದರೆ ಹುಣ್ಣಿಮೆ ದಿನ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುವುದು. ಎಲ್ಲಾ ಹುಣ್ಣಿಮೆಗಳಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣುವ...
‘ಡ್ರೋನ್ ಪ್ರತಾಪ್’ ಈ ಹೆಸರು ಕೇಳಿದ ತಕ್ಷಣವೇ ಸಾಕಷ್ಟು ಜನರು ವ್ಯಂಗ್ಯದಿಂದ ನೋಡ್ತಾರೆ. ತಾನೇನೋ ಸಾಧಿಸಿದ್ದೇನೆ ಎಂದು ತೋರಿಸಿ, ಹಲವು ವಿಡಿಯೋಗಳಲ್ಲಿ ಮಾತನಾಡಿದ್ದ ಪ್ರತಾಪ್ ಮಾತುಗಳು ಸುಳ್ಳು ಎನ್ನುವುದು ತಿಳಿಯುತ್ತಿದ್ದಂತೆಯೇ ಭಾರೀ ಟ್ರೋಲ್ ಆಗಿತ್ತು. ಒಂದು ಹಂತದಲ್ಲಿ ಭಾರೀ ಜನಪ್ರಿಯಗೊಂಡಿದ್ದ ಪ್ರತಾಪ್ ಹೆಸರು ನಗೆ ಪಾಟಲಿಗೀಡಾಗಿತ್ತು...