11:10 AM Saturday 18 - October 2025

ಚಿಕ್ಕಮಗಳೂರು: 55 ವರ್ಷದ ಮಹಿಳೆಗೆ ಮಂಗನ ಕಾಯಿಲೆ ದೃಢ: ಹೆಚ್ಚಿದ ಆತಂಕ

koppa hospital
08/02/2024

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆ ಆತಂಕ ಮತ್ತಷ್ಟು ಹೆಚ್ಚಳವಾಗಿದೆ. ಇದೀಗ 55 ವರ್ಷದ ಮಹಿಳೆಯೊಬ್ಬರಿಗೆ ಕೆ.ಎಫ್.ಡಿ.(ಮಂಗನ ಕಾಯಿಲೆ) ದೃಢವಾಗಿದೆ.

ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆ‌ ಪೀಡಿತರ ಸಂಖ್ಯೆ  9ಕ್ಕೆ ಏರಿಕೆಯಾಗಿದೆ.  9 ಮಂದಿಯಲ್ಲಿ‌‌ ಓರ್ವ ವೃದ್ಧ ಮೃತ, ನಾಲ್ವವರು ಗುಣಮುಖರಾಗಿದ್ದಾರೆ. ಸದ್ಯ  ನಾಲ್ವರು ಕೆ.ಎಫ್.ಡಿ ಪೀಡಿತರಿಗೆ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದೆ.

ಪರೀಕ್ಷೆಗೊಳಪಟ್ಟಿದ್ದ 7 ಮಂದಿ ಪೈಕಿ ಒಬ್ಬರಲ್ಲಿ ಕೆ.ಎಫ್.ಡಿ ಪತ್ತೆಯಾಗಿದೆ. ಕಾಫಿ ಎಸ್ಟೇಟ್ ಭಾಗದಲ್ಲಿ ಕೆ.ಎಫ್‌.ಡಿ ಪ್ರಕರಣಗಳು ಕಂಡುಬರುತ್ತಿವೆ.  ಕೊಪ್ಪ ತಾಲೂಕಿನಲ್ಲೇ ಮಂಗನ ಕಾಯಿಲೆ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿವೆ.

ಕೆ.ಎಫ್‌.ಡಿ. ನಿಯಂತ್ರಣಕ್ಕೆ  ಆರೋಗ್ಯ ಇಲಾಖೆ ಸಿಬ್ಬಂದಿ ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ.  ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಕೆ.ಎಫ್.ಡಿ ವಾರ್ಡ್ ತೆರೆದಿದೆ.

ಇತ್ತೀಚಿನ ಸುದ್ದಿ

Exit mobile version