7:43 PM Wednesday 20 - August 2025

ಭಾರತದ ವಿರೋಧದ ನಡುವೆಯೇ ಶ್ರೀಲಂಕಾಕ್ಕೆ ಪ್ರವೇಶಿಸಿದ ಚೀನಾದ ಸ್ಪೈ ಹಡಗು

chinese research ship
16/08/2022

ಭಾರತದ ತೀವ್ರ ವಿರೋಧದ ನಡುವೆಯೂ ಚೀನಾದ ಸ್ಪೈ ಹಡಗು ಶ್ರೀಲಂಕಾಕ್ಕೆ ಪ್ರವೇಶಿಸಿದ್ದು, ಭಾರತದ ಭದ್ರತೆಗೆ ಹಾಗೂ ಆರ್ಥಿಕ ವ್ಯವಸ್ಥೆಗೆ ಏಟು ನೀಡಲು ಚೀನಾ ಸಂಚು ಹೂಡಿದೆ ಎನ್ನುವ ಆತಂಕ ಇದೀಗ ಸೃಷ್ಟಿಯಾಗಿದೆ.

ಚೀನಾದ ಬೇಹುಗಾರಿಕಾ ಹಡಗು ಶ್ರೀಲಂಕಾವನ್ನು ಪ್ರವೇಶಿಸುತ್ತಿರುವ ಬಗ್ಗೆ ಅಮೆರಿಕ ಕೂಡ ಆತಂಕ ವ್ಯಕ್ತಪಡಿಸಿತ್ತು.  ಚೀನಾದ ಹಡಗಿನ ಕಾರ್ಯಕ್ರಮವನ್ನು ಮುಂದೂಡುವಂತೆ ಅಮೆರಿಕ  ಕೆಲವು ದಿನಗಳ ಹಿಂದೆ ಮನವಿ ಮಾಡಿತ್ತು. ಆದರೆ, ಇದೀಗ ಶ್ರೀಲಂಕಾ ಸರ್ಕಾರ ಚೀನಾದ ಹಡಗಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಹಡುಗು ಶ್ರೀಲಂಕಾವನ್ನು ಪ್ರವೇಶಿಸಿದೆ.

ಭಾರತದ ರಕ್ಷಣಾ ವ್ಯವಸ್ಥೆ ಮೇಲೆ ಕಣ್ಣಿಡಲು ಚೀನಾದ ಹಡುಗು ಶ್ರೀಲಂಕಾಕ್ಕೆ ಆಗಮಿಸುತ್ತಿದೆ. ಈ ಹಡಗಿನಲ್ಲಿ ಟ್ರ್ಯಾಕಿಂಗ್ ವ್ಯವಸ್ಥೆಗಳಿದ್ದು, ಭಾರತದ ಮೇಲೆ ಕಣ್ಣಿಡಲು ಚೀನಾ ಪ್ರಯತ್ನಿಸುತ್ತಿದೆ ಎಂದು  ಭಾರತದ ವಿದೇಶಾಂಗ ವಕ್ತಾರ ಅಮರಿಂದಮ್ ಭಾಗ್ಚಿ ಕಳೆದ ತಿಂಗಳು ಟ್ವೀಟ್ ಮಾಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version