ಕಂಗನಾಗೆ ಕಪಾಳಮೋಕ್ಷ ಪ್ರಕರಣ: ಮಹಿಳಾ ಕಾನ್ಸ್ ಟೇಬಲ್ ಅರೆಸ್ಟ್

ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆಯಾಗಿರುವ ಕಂಗನಾರಣಾವತ್ ಅವರಿಗೆ ಕಪಾಲಮೋಕ್ಷ ಮಾಡಿದ ಸಿಐಎಸ್ಎಫ್ ಮಹಿಳಾ ಕಾನ್ಸ್ಟೇಬಲ್ ಕುಲುವಿಂದರ್ ಕೌರ್ ಅವರನ್ನು ಬಂಧಿಸಲಾಗಿದೆ. ಕಪಾಳ ಮೋಕ್ಷ ಘಟನೆಯ ಬೆನ್ನಿಗೆ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿತ್ತು.
ದಿನದ ಹಿಂದೆ ದೆಹಲಿಗೆ ಹೋಗುವುದಕ್ಕಾಗಿ ಮೊಹಾಲಿ ವಿಮಾನ ನಿಲ್ದಾಣಕ್ಕೆ ನಟಿ ಬಂದಿದ್ದಾಗ ಈ ಘಟನೆ ನಡೆದಿತ್ತು.
ರೈತ ಹೋರಾಟದ ಸಮಯದಲ್ಲಿ ಮಹಿಳೆಯರನ್ನು ಅವಮಾನಿಸುವ ಹೇಳಿಕೆ ನೀಡಿದ್ದಕ್ಕಾಗಿ ಕಪಾಲಮೋಕ್ಷ ಮಾಡಿದ್ದೇನೆ ಎಂದು ಕುಲ್ವಿಂದರ್ ಈ ಕಪಾಲಮೋಕ್ಷವನ್ನು ಸಮರ್ಥಿಸಿಕೊಂಡಿದ್ದರು, ರೈತ ಹೋರಾಟದಲ್ಲಿ ಇವರ ತಾಯಿಯೂ ಭಾಗವಹಿಸಿದ್ದರು. ನೂರು ರೂಪಾಯಿಗೆ ಬೇಕಾಗಿ ಇವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಂಗಣ ಆಗ ಹೇಳಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth