10:02 PM Thursday 28 - August 2025

ಅಶ್ವಮೇಧಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ: ರಾಜ್ಯದಲ್ಲಿ ಓಡಾಡಲಿದೆ ಈ ವಿಶೇಷ ಬಸ್!

siddaramaiah
05/02/2024

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ “100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳ ( ಅಶ್ವಮೇಧ — ಪಾಯಿಂಟ್ ಟು ಪಾಯಿಂಟ್ ಎಕ್ಸ್ ಪ್ರೆಸ್ ) ಬಸ್ಸುಗಳನ್ನು ಲೋಕಾರ್ಪಣೆ ಮಾಡಿದರು.

ಶಕ್ತಿ ಯೋಜನೆಯ ಒತ್ತಡ ಕಡಿಮೆಗೊಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸುಮಾರು 800 ಹೊಸ ಬಸ್ ಗಳನ್ನು ಸೇರ್ಪಡೆಗೊಳಿಸಲು ಮುಂದಾಗಿದೆ.

ashwamedha

54 ಆಸನದ ಹೊಸ ವಿನ್ಯಾಸದ ಬಸ್ ಇದಾಗಿದ್ದು, ಪ್ರಯಾಣದ ಮರು ಕಲ್ಪನೆ ಎಂಬ ಘೋಷವಾಕ್ಯದೊಂದಿಗೆ ನೂತನ ಬಸ್ ಸಂಚರಿಸಲಿದೆ.

ಮೇ 24ರೊಳಗೆ 800 ಅಶ್ವಮೇಧ ಬಸ್ ಗಳು ಕೆ.ಎಸ್.ಆರ್.ಟಿ.ಸಿ. ಡಿಪೋ ಸೇರಲಿವೆ. ಈ ಬಸ್ ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ ಇರಲಿದೆ. ಬೇಡಿಕೆ ಇರುವ ಕಡೆ ನೂರು ಬಸ್ ಗಳ ಕಾರ್ಯಾಚರಣೆ ನಡೆಸಲಿವೆ.


ಪಾಯಿಂಟು ಟು ಪಾಯಿಂಟ್ ಎಕ್ಸಪ್ರೆಸ್ ಅಶ್ವಮೇಧ ಬಸ್ ಗಳು 3.42 ಮೀಟರ್ ಎತ್ತರ ಇದೆ. ಒಟ್ಟು 52 ಆಸನಗಳು ಇರುವ ಈ ಬಸ್ ಗಳು ಬಕೆಟ್ ರೀತಿಯ ವಿನ್ಯಾಸವನ್ನು ಹೊಂದಿದೆ.

ಪ್ರಯಾಣದ ಮರು ಕಲ್ಪನೆ’ ಎಂಬ ವಾಕ್ಯದೊಂದಿಗೆ ಈ ಬಸ್ ಗಳನ್ನು ಪರಿಚಯ ಮಾಡಲಾಗಿದೆ. ಈ ಬಸ್ಗಳ ಮುಂದಿನ ಮತ್ತು ಹಿಂದಿನ ಗಾಜುಗಳು ವಿಶಾಲವಾಗಿದೆ.

ಕಿಟಕಿ ಪ್ರೇಮ್ ಹಾಗೂ ಗಾಜು ದೊಡ್ಡಾಗಿದ್ದು, ಟಿಂಟೆಡ್ ಗಾಜುಗಳನ್ನು ಹೊಂದಿದೆ. ಬಸ್ನಲ್ಲಿ ಸ್ಥಳ ಟ್ರ್ಯಾಕರ್, ಪ್ಯಾನಿಕ್ ಬಟನ್ ಹಾಗೂ ಬಸ್ ಒಳಗಿನ ಮುಂಭಾಗದಲ್ಲಿ ಎಲ್ ಇಡಿ ಫಲಕ ಹೊಂದಿದೆ. ಲಗೇಜ್ ಕ್ಯಾರಿಯರ್ಗಳನ್ನು ವಿನೂತನವಾಗಿ ವಿನ್ಯಾಸ ಮಾಡಲಾಗಿದೆ.

ಇತ್ತೀಚಿನ ಸುದ್ದಿ

Exit mobile version