12:10 PM Saturday 23 - August 2025

ಒಂದಲ್ಲ, ನಾಲ್ಕು ಬಾರಿ ಟ್ರಾಲಿ ಬ್ಯಾಗ್ ಕಳ್ಳತನ: ಕೊನೆಗೂ ಪೊಲೀಸರ ಬಲೆಗೆ ಬಿದ್ದ ದಂಪತಿ

15/08/2023

ರೈಲುಗಳಲ್ಲಿ ಟ್ರಾಲಿ ಬ್ಯಾಗ್‌ಗಳನ್ನು ಕದ್ದ ದಂಪತಿಯನ್ನು ಬಂಧಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಅಹಲ್ಯಾನಗರಿ ಎಕ್ಸ್‌ಪ್ರೆಸ್ ರೈಲಲ್ಲಿ ದಂಪತಿ ಸಹಾಯದಿಂದ ಟ್ರಾಲಿ ಬ್ಯಾಗ್‌ಗಳನ್ನು ಕದ್ದ ಘಟನೆ ನಡೆದಿದೆ. ಒಂದು ಬ್ಯಾಗ್​ನಲ್ಲಿ ಲಕ್ಷಗಟ್ಟಲೆ ಮೌಲ್ಯದ ಲಿವರ್ ಟೆಸ್ಟಿಂಗ್ ಮಷಿನ್ ಇರುವುದು ಕೂಡ ಬಯಲಾಗಿದೆ.

ಈ ಹಿನ್ನೆಲೆಯಲ್ಲಿ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬರು ಟ್ರಾಲಿ ಬ್ಯಾಗನ್ನು ತನ್ನ ಸಹಚರರೊಂದಿಗೆ ಸ್ಕೂಟರ್‌ನಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ.

ನಂತರ ಪೊಲೀಸರು ಆರೋಪಿ ಪೂಜಾ ವರ್ಮಾ ಮತ್ತು ಆಕೆಯ ಪತಿ ರಾಜ್‌ಕುಮಾರ್ ಯಾದವ್ ಎಂಬುವವರನ್ನು ಬಂಧಿಸಿದ್ದಾರೆ.

ಇವರಿಂದ ಯಕೃತ್ತು ಪರೀಕ್ಷಿಸುವ ಯಂತ್ರ, ಕದ್ದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಆರ್‌ಪಿ ಪೊಲೀಸರು ಇವರ ಇತರ ಇಬ್ಬರು ಸಹಚರರನ್ನು ಸಕ್ರಿಯವಾಗಿ ಹುಡುಕುತ್ತಿದ್ದಾರೆ. ಯಾಕೆಂದರೆ ಈ ದಂಪತಿ ಈ ಕೃತ್ಯ ಮಾಡಿರುವುದು ಇದೇ ಮೊದಲಲ್ಲ. ನಾಲ್ಕು ಬಾರಿ ಟ್ರಾಲಿಗಳನ್ನು ಕದ್ದಿದ್ದರಂತೆ..!

ಇತ್ತೀಚಿನ ಸುದ್ದಿ

Exit mobile version