ಹಿಮಾಚಲಪ್ರದೇಶದಲ್ಲಿ ವರುಣನ ಆರ್ಭಟ: ಧರೆಗುರುಳಿದ ಕಸಾಯಿಖಾನೆ, ಮನೆಗಳು

15/08/2023

ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ‌. ಹೀಗಾಗಿ ಮಳೆ ಹಾನಿ ಮುಂದುವರೆದಿದೆ. ಈ ಮಧ್ಯೆ ಉಂಟಾದ ಭೂಕುಸಿತದಲ್ಲಿ ಮೂರು ಮಹಡಿಯ ಕಸಾಯಿಖಾನೆ ಸಹಿತ ಹಲವಾರು ಮನೆಗಳು ಕುಸಿದುಬಿದ್ದಿರುವ ದುರಂತ ಘಟನೆ ನಡೆದಿದೆ.

ಕೃಷ್ಣನಗರದ ಖಾಲಿನಿ-ಟೂಟಿಖಂಡಿ ಬೈಪಾಸ್ ಸಮೀಪದ ಲಾಲ್ ಪಾಣಿ ಎಂಬಲ್ಲಿ ಈ ದುರಂತ ನಡೆದಿದೆ. ಈ ಕುರಿತು ಶಿಮ್ಲಾದ ಜಿಲ್ಲಾಧಿಕಾರಿ ಆದಿತ್ಯ ನೇಗಿ ನೀಡಿರುವ ಮಾಹಿತಿ ಪ್ರಕಾರ, ಈ ಪ್ರದೇಶದಲ್ಲಿ ಬೆಟ್ಟವೊಂದು ಕುಸಿದ ಪರಿಣಾಮ ಐದರಿಂದ ಏಳು ಮನೆಗಳು ಕುಸಿದಿವೆ. ಆದರೆ ಈ ದುರ್ಘಟನೆಯಲ್ಲಿ ಜನರು ಸಿಲುಕಿಕೊಂಡಿರುವ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ ಎಂದಿದ್ದಾರೆ.

ಈ ಗುಡ್ಡ ಕುಸಿತದ ಪರಿಣಾಮ ಅಕ್ಕ ಪಕ್ಕದಲ್ಲಿರುವ ಮನೆಗಳೂ ಹಾನಿಗೊಳಗಾಗುವ ಭೀತಿ ಎದುರಾಗಿದೆ. ಕಳೆದ ಮೂರು ದಿನಗಳಿಂದ ಈ ಭಾಗಲದಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಮರಗಳು ಉರುಳುವುದು ಹಾಗೂ ಗುಡ್ಡ ಕುಸಿತದಂತಹ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಶಿಮ್ಲಾ ಪಟ್ಟಣದ ಸಮ್ಮರ್ ಹಿಲ್ ಪ್ರದೇಶದಲ್ಲಿನ ಶಿವ ಮಂದಿರದಲ್ಲಿ ಗುಡ್ಡಕುಸಿತ ಉಂಟಾಗಿ ಒಂಭತ್ತು ಜನ ಸಾವಿಗೀಡಾಗಿದ್ದರು.

ಇತ್ತೀಚಿನ ಸುದ್ದಿ

Exit mobile version