ತಂದೆ ಗ್ಯಾಸ್ ಸಿಲಿಂಡರ್ ಪೂರೈಸುತ್ತಿದ್ದ ಸೊಸೈಟಿಯಲ್ಲೇ ಐಷಾರಾಮಿ ಮನೆ ಖರೀದಿಸಿದ ಕ್ರಿಕೆಟಿಗ ರಿಂಕು ಸಿಂಗ್

rinku singh
07/11/2024

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ ಮನ್ ರಿಂಕು ಸಿಂಗ್, ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2025 ಸೀಸನ್‌ ನಲ್ಲಿ 13 ಕೋಟಿ ರೂ.ಗೆ ಖರೀದಿಯಾಗಿದ್ದಾರೆ. ಅತ್ತ ಮಿಲಿಯನೇರ್ ಆಗುತ್ತಿದ್ದಂತೆಯೇ ರಿಂಕು ಸಿಂಗ್ ತಮ್ಮ ತವರು ಅಲಿಗಢದಲ್ಲಿ 500 ಚದರ ಗಜ ವಿಲ್ಲಾ ಖರೀದಿ ಮಾಡಿದ್ದಾರೆ.

ಈ ಎಸ್ಟೇಟ್‌ ಗೆ ರಿಂಕು ಅವರ ತಂದೆ ಗ್ಯಾಸ್‌ ಸಿಲಿಂಡರ್‌ ಪೂರೈಕೆ ಮಾಡುತ್ತಿದ್ದರಂತೆ. ಆದರೆ ಇದೀಗ ಅವರ ಪುತ್ರನೇ ಈ ವಿಲ್ಲಾವನ್ನು ಖರೀದಿ ಮಾಡಿದ್ದಾರೆ. ಈ ಮೂಲಕ ತಮ್ಮ ಕನಸು ನನಸು ಮಾಡಿದ್ದಾರೆ.

ಈ ಮನೆಯ ಬೆಲೆ ಅಂದಾಜು 4 ಕೋಟಿಯಿಂದ 7 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಇದರ ನಿಖರ ಬೆಲೆ ತಿಳಿದು ಬಂದಿಲ್ಲ.  ಓಝೋನ್ ಸಿಟಿಯ ಗೋಲ್ಡನ್ ಎಸ್ಟೇಟ್‌ ನಲ್ಲಿರುವ ಕೋಠಿ ನಂ. 38 ರಿಂಕು ಸಿಂಗ್ ಅವರ  ಹೊಸ ವಿಳಾಸವಾಗಿದೆ.

ಓಝೋನ್ ಸಿಟಿ ಎಸ್ಟೇಟ್ ಅನ್ನು ಅಲಿಗಢದಲ್ಲಿ ಅತ್ಯಂತ ದುಬಾರಿ ಮತ್ತು ಐಷಾರಾಮಿ ಸಮುದಾಯವೆಂದು ಪರಿಗಣಿಸಲಾಗಿದೆ. ಚಿಕಾಗೋ, ಲಂಡನ್ ಮತ್ತು ಸಿಂಗಾಪುರದಂತಹ ದೇಶಗಳ ಐಷಾರಾಮಿ ಜೀವನಶೈಲಿ ಸಮಾಜದಿಂದ ಪ್ರೇರಿತರಾಗಿರುವವರು ಇಲ್ಲಿ ಮನೆ ಖರೀದಿಸುತ್ತಾರೆ.

ರಿಂಕೂ ಸೊಸೈಟಿಯು ಬ್ಯಾಡ್ಮಿಂಟನ್ ಕೋರ್ಟ್, ಸ್ಕ್ವಾಷ್ ಕೋರ್ಟ್, ಬಾಸ್ಕೆಟ್‌ಬಾಲ್ ಅಂಕಣ ಮತ್ತು ಇತರ ಹಲವು ಸೌಲಭ್ಯಗಳೊಂದಿಗೆ 24 ಗಂಟೆಗಳ ಗಾಲ್ಫ್ ಆಡುವ ಸೌಲಭ್ಯವನ್ನು ಹೊಂದಿದೆ. ಜ್ವಾಲಾಮುಖಿ ಜಲಪಾತವೂ ಇದೆ. ರಿಂಕು ಸಿಂಗ್ ಅವರ ಐಷಾರಾಮಿ ಮನೆಯಲ್ಲಿ ಐಷಾರಾಮಿ ಸ್ನಾನಗೃಹವಿದೆ. ಇವುಗಳ ಜೊತೆಗೆ ಸರ್ವೆಂಟ್ ರೂಮ್, ಸ್ಟೋರ್ ರೂಮ್, ಪೌಡರ್ ರೂಮ್, ಪ್ಯಾಂಟ್ರಿ, ಕಿಚನ್, ಡೈನಿಂಗ್, ಡ್ರಾಯಿಂಗ್, ಲಿವಿಂಗ್ ರೂಮ್ ಮತ್ತು ಲಾಂಜ್ ಇದೆ. ಇವುಗಳೊಂದಿಗೆ ಖಾಸಗಿ ಪೂಲ್, ಟೆರೇಸ್, ಆಂಫಿಥಿಯೇಟರ್‌ ನಂತಹ ಅನೇಕ ಹೊಸ ಸೌಲಭ್ಯಗಳು ಇವೆಯಂತೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version