ದ್ವೇಷ ಬಿಟ್ಟು ದೇಶ ಕಟ್ಟು, ಸೌಜನ್ಯ ಪರ ಹೋರಾಟದಲ್ಲಿ ಭಾಗಿಯಾದ ದಲಿತ್ ಸೇವಾ ಸಮಿತಿಯ . ಕೆ. ಸೇಸಪ್ಪ ಬೆದ್ರಕಾಡು

muslim
01/09/2023

ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ( ರಿ.) ವಿಟ್ಲ ಇದರ ಸ್ಥಾಪಕಧ್ಯಕ್ಷರಾದ ಬಿ. ಕೆ. ಸೇಸಪ್ಪ ಬೆದ್ರಕಾಡುರವರು ಆಗಸ್ಟ್ 28ರಂದು ವಿಟ್ಲ ವಲಯ ಎಸ್. ಎಸ್. ಎಫ್. ವತಿಯಿಂದ ನಡೆದ ದ್ವೇಷ ಬಿಟ್ಟು ದೇಶ ಕಟ್ಟು ಎಂಬ ಸೌಹಾರ್ದ ಕಾರ್ಯಕ್ರಮದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಭಾಗವಹಿಸಿದರು.

ಆಗಸ್ಟ್ 31ರಂದು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಭವನದಲ್ಲಿ ನಡೆದ ಸೌಜನ್ಯ ಪರ ಪ್ರತಿಭಟನೆ ನಡೆಸಲು ಹಲವು ಹಿಂದೂ ಮುಖಂಡರೊಂದಿಗೆ ರಾಜಕೀಯ ರಹಿತವಾಗಿ ಪ್ರತಿಭಟಿಸಲು ಸೌಜನ್ಯ ಹೋರಾಟ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಸಂಚಾಲಕರಾಗಿ ಸ್ಥಾಪಕಧ್ಯಕ್ಷರನ್ನು ಹಾಗು ಹಿಂದು ಮುಖಂಡರನ್ನು ನೇಮಕ ಮಾಡಲಾಯಿತು.

ಬಿ. ಕೆ. ಸೇಸಪ್ಪ ಬೆದ್ರಕಾಡು ರವರ ಹೋರಾಟವನ್ನು ಎಲ್ಲಾ ಸಮುದಾಯದವರು ತಿಳಿದುಕೊಂಡಿರುವುದು ನಮಗೆ ಹೆಮ್ಮೆಯಾಗಿದೆ ಎಂದು ದಲಿತ್ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಯು. ವಿಟ್ಲ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version