ಮಳೆಯಲ್ಲಿ ಡ್ಯಾನ್ಸ್: ಸೀರೆಯುಟ್ಟು ಕುಣಿದು ಕುಪ್ಪಳಿಸಿದ ವಿದ್ಯಾರ್ಥಿನಿಯರು!!
ಚಾಮರಾಜನಗರ: ಸುರಿಯುತ್ತಿದ್ದ ತುಂತುರು ಮಳೆಯನ್ನು ಕಂಡ ಸೀರೆಯುಟ್ಟಿದ್ದ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದ ಘಟನೆ ಚಾಮರಾಜನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸಂಜೆ ನಡೆದಿದೆ.
ಇಂದು ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಭ್ರಮ ಪ್ರಯುಕ್ತ ಸ್ಯಾರಿ ಡೇ ಕಾರ್ಯಕ್ರಮ ಆಯೋಜನೆಯಾಗಿತ್ತು. ಈ ವೇಳೆ ತುಂತುರು ಮಳೆ ಬೀಳುವುದನ್ನು ಕಂಡ ವಿದ್ಯಾರ್ಥಿನಿಯರು ಸುಂಟರಗಾಳಿ-ಸುಂಟರಗಾಳಿ ಎಂಬ ಹಾಡಿಗೆ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಸೀರೆ ಉಟ್ಟು ದಿಗ್ಗಜರು ಚಿತ್ರದ ಓ ಗೆಳೆಯ ಎಂಬ ಹಾಡಿಗೆ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ಸೀರೆ ಉಟ್ಟು ಕುಣಿದ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ಲಾಗಿದ್ದು ಯುವತಿಯರ ಡ್ಯಾನ್ಸ್ ಗೆ ನೆಟ್ಟಿಗರು ಫಿಧಾ ಆಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























