ಉಪೇಂದ್ರ ಜಾಹೀರಾತು ನೀಡುತ್ತಿರುವ ಉತ್ಪನ್ನಗಳ ಬಹಿಷ್ಕಾರಕ್ಕೆ ತೀರ್ಮಾನ!

18/08/2023
ಬೆಂಗಳೂರು: ಜಾತಿ ನಿಂದನೆ ವಿಚಾರವಾಗಿ ಉಪೇಂದ್ರ ಅವರ ವಿರುದ್ಧ ದಾಖಲಾಗಿರುವ ಎಫ್ ಐಆರ್ ಗೆ ತಡೆಯಾಜ್ಞೆ ನೀಡಲಾಗಿದೆ. ಇತ್ತ ಉಪೇಂದ್ರ ವಿರುದ್ಧ ಕ್ರಮಕೈಗೊಳ್ಳದ ಸರ್ಕಾರದ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನೊಂದೆಡೆ ಉಪೇಂದ್ರ ಬ್ರಾಂಡ್ ಅಂಬಾಸಿಡರ್ ಆಗಿರುವ ಉತ್ಪನ್ನಗಳ ಬಹಿಷ್ಕಾರಕ್ಕೆ ದಲಿತರು ಮುಂದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಉಪೇಂದ್ರ ಬ್ರಾಂಡ್ ಅಂಬಾಸಿಡರ್ ಆಗಿರುವ ಉತ್ಪನ್ನಗಳಾದ ಎಸ್.ಕೆ.ಸೂಪರ್ ಟಿಎಂಟಿ ಕಬ್ಬಿಣ, ಲೂನಾರ್ಸ್ ವಾಕ್ಮೇಟ್ ಚಪ್ಪಲಿ ಸೇರಿದಂತೆ ಉಪೇಂದ್ರ ಅವರು ಪ್ರಚಾರ ಪಡಿಸುತ್ತಿರುವ ಯಾವುದೇ ಉತ್ಪನ್ನಗಳನ್ನು ಬಹಿಷ್ಕಾರಿಸಬೇಕು ಎಂದು ಸಮುದಾಯದ ಮುಖಂಡರು ಕರೆ ನೀಡಿದ್ದಾರೆ.
ಉಪೇಂದ್ರ ಅವರ ಚಿತ್ರಗಳನ್ನು ಬಹಿಷ್ಕರಿಸುವುದಾಗಿ ಈಗಾಗಲೇ ಸಮುದಾಯ ಕರೆ ನೀಡಿದ ಬೆನ್ನಲ್ಲೇ ಇದೀಗ ಉಪೇಂದ್ರ ಪ್ರಚಾರ ಪಡಿಸುತ್ತಿರುವ ಉತ್ಪನ್ನಗಳಿಗೂ ಬಹಿಷ್ಕಾರ ಹಾಕಲು ತೀರ್ಮಾನಿಸಲಾಗಿದೆ.