ಪಟಾಕಿಗೆ ನಿಯಂತ್ರಣ ಹೇರಿದರೂ, ಪಟಾಕಿ ಸಿಡಿದು 25ಕ್ಕೂ ಹೆಚ್ಚು ಜನರಿಗೆ ಗಾಯ

14/11/2023
ಬೆಂಗಳೂರು: ಹಸಿರು ಪಟಾಕಿ ಹೊರತುಪಡಿಸಿ, ಉಳಿದೆಲ್ಲ ಪಟಾಕಿಗಳಿಗೆ ಸರ್ಕಾರ ನಿಷೇಧ ಹೇರಿದ್ದರೂ ಬೆಂಗಳೂರಿನಲ್ಲಿ ಪಟಾಕಿಯಿಂದಾಗಿ 25ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ಸೇರಿದ್ದಾರೆ.
ಈವರೆಗೆ ಬೆಂಗಳೂರಿನಲ್ಲಿ 26 ಮಂದಿಗೆ ಕಣ್ಣಿಗೆ ಹಾನಿಯಾಗಿದೆ. ಇವರೆಲ್ಲರೂ ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಪೈಕಿ 13 ಮಂದಿ ಮಕ್ಕಳಿದ್ದಾರೆ. ಈ ಪೈಕಿ 5 ಮಂದಿಯ ಕಣ್ಣಿಗೆ ಗಂಭೀರವಾದ ಗಾಯಗಳಾಗಿವೆ.
ರಾಜ್ಯದಲ್ಲಿ ಹಸಿರು ಪಟಾಕಿಗೆ ಮಾತ್ರವೇ ಅವಕಾಶ ನೀಡಲಾಗಿದ್ದರೂ, ದೊಡ್ಡ ದೊಡ್ಡ ಶಬ್ಧಗಳ ಪಟಾಕಿಗಳ ಶಬ್ಧಗಳು ಕೇಳಿ ಬಂದವು. ಪಟಾಕಿ ಸಿಡಿಸಿದವರಿಗಿಂತಲೂ ಪಟಾಕಿ ಸಿಡಿಯುವುದನ್ನು ನೋಡಲು ಹೋದವರಿಗೆ ಹೆಚ್ಚು ಗಾಯಗಳಾಗಿವೆ.
ಪಟಾಕಿಗೆ ನಿಯಂತ್ರಣ ಹೇರಲಾಗಿದ್ದರೂ, ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಿದೆ. ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಿದೆ. ಅಂತೆಯೇ ನಗರಗಳಲ್ಲಿ ಪಟಾಕಿ ಸಿಡಿತದಿಂದಾಗಿ ಹೆಚ್ಚಿನ ಪ್ರಮಾಣದ ವಾಯು ಮಾಲಿನ್ಯ ಉಂಟಾಗಿದೆ.