ಮಕ್ಕಳ ಪ್ಯಾಂಟ್, ಒಳ ಉಡುಪು ಬಿಚ್ಚಿಸಿ ಶಿಕ್ಷಕನಿಂದ ವಿಕೃತಿ: ದೈಹಿಕ ಶಿಕ್ಷಕ ಅರೆಸ್ಟ್

19/12/2023
ಬೀದರ್: ಶಾಲಾ ಮಕ್ಕಳ ಪ್ಯಾಂಟ್ ಒಳ ಉಡುಪು ಬಿಚ್ಚಿಸಿ ಶಿಕ್ಷಕನೋರ್ವ ವಿಕೃತಿ ಮೆರೆಯುತ್ತಿರುವ ಆರೋಪ ಬೀದರ್ ಜಿಲ್ಲೆಯ ಪ್ರೌಢ ಶಾಲೆಯೊಂದರಲ್ಲಿ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಖಾಸಗಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ರಮೇಶ್ ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಯಾಗಿದ್ದು, ಈತ 10ನೇ ತರಗತಿಯ ಮಕ್ಕಳ ಪ್ಯಾಂಟ್, ಒಳ ಉಡುಪು ಬಿಚ್ಚಿಸಿ ಮೈದಾನದಲ್ಲಿ ಓಡಿಸುತ್ತಿದ್ದ. ಇನ್ನೂ ವಿದ್ಯಾರ್ಥಿಗಳಿಂದ ಪರಸ್ಪರ ಗುಪ್ತಾಂಗಗಳನ್ನು ಮುಟ್ಟಿಸಿ ವಿಡಿಯೋ ಮಾಡಿಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ.
ಶಾಲಾ ಬಿಡುವಿನ ನಂತರ ಮಕ್ಕಳಿಗೆ ಅಸಭ್ಯವಾದ ಪಾಠ ಮಾಡುತ್ತಿದ್ದ ಈತ, ಪಾಠ ಕೇಳದೇ ಇರುವವರಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈದು ಹೊಡೆಯುತ್ತಿದ್ದ ಎಂದು ವಿದ್ಯಾರ್ಥಿಗಳು ದೂರಿದ್ದಾರೆ ಎಂದು ವರದಿಯಾಗಿದೆ.