ಡಿ.ಕೆ.ಬ್ರದರ್ಸ್ ಆಟ ಆರಂಭ: ಹೆಚ್.ಡಿ.ಕುಮಾರಸ್ವಾಮಿ ಪರಿವಾರಕ್ಕೆ ಶಾಕ್ ಮೇಲೆ ಶಾಕ್

ಬೆಂಗಳೂರು: ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಗೆ ಡಿ.ಕೆ.ಬ್ರದರ್ಸ್ ಖೆಡ್ಡಾ ತೋಡಿದ್ದು, ಜೆಡಿಎಸ್ ಸಾಮ್ರಾಜ್ಯವನ್ನು ನಡುಗಿಸಿದ್ದಾರೆ.
ಗುರುವಾರ ರಾತ್ರೋರಾತ್ರಿ ಆಪರೇಷನ್ ಹಸ್ತದ ಮೂಲಕ ಡಿ.ಕೆ.ಬ್ರದರ್ಸ್ ಹೆಚ್ ಡಿಕೆ ಪರಿವಾರಕ್ಕೆ ಶಾಕ್ ನಿಡಿದ್ದು, 300ಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್—ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಕಾಂಗ್ರೆಸ್ ಗೆ ಪ್ರಬಲ ಪೈಪೋಟಿ ನೀಡುತ್ತಾರೆ ಎನ್ನುವ ನಿರೀಕ್ಷೆಗಳು ಹುಟ್ಟಿತ್ತು. ಈವರೆಗೆ ಸೈಲೆಂಟ್ ಆಗಿದ್ದ ಡಿ.ಕೆ.ಶಿವಕುಮಾರ್ ಇದೀಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಸಹೋದರನ ಪರವಾಗಿ ಅಸಲಿ ರಾಜಕೀಯ ದಾಳ ಉರುಳಿಸಲು ಆರಂಭಿಸಿದ್ದು, ಜೆಡಿಎಸ್ ಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ.
ಅಕ್ಕೂರು ದೊಡ್ಡಿ ಶಿವಣ್ಣ ಸೇರಿ 300ಕ್ಕೂ ಹೆಚ್ಚು ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಗಾಳ ಹಾಕಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಖುದ್ದು ಡಿಕೆ ಅವರೇ ಕಾಂಗ್ರೆಸ್ ಧ್ವಜ ನೀಡಿ ದಳ ಮುಖಂಡರನ್ನು ಸ್ವಾಗತಿಸಿದ್ದಾರೆ.
ಅಲ್ಲದೇ, ಇವರೆಲ್ಲರೂ ಕುಮಾರಸ್ವಾಮಿ ಅವರ ಬೆಂಬಲಿಗರು, ಹೀಗೆ ಪ್ರತಿ ದಿನ ಸಾವಿರಾರು ಜನರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇನ್ನೂ, ಚನ್ನಪಟ್ಟಣದ ಕಾರ್ಯಕರ್ತರನ್ನು ಬಿಟ್ಟು ಕುಮಾರಸ್ವಾಮಿ ಮಂಡ್ಯಕ್ಕೆ ಹೋಗಿದ್ದಾರೆ. ಅಲ್ಲಿಯೂ ಅವರು ಗೆಲ್ಲುವುದಿಲ್ಲ, ಜೆಡಿಎಸ್ ಗಾಗಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ, ನಮ್ಮ ಜೊತೆಗೆ ಬನ್ನಿ ಎಂದು ಡಿ.ಕೆ.ಶಿವಕುಮಾರ್ ಜೆಡಿಎಸ್ ಕಾರ್ಯಕರ್ತರಿಗೆ ಬಹಿರಂಗವಾಗಿ ಆಫರ್ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth