12:48 PM Saturday 24 - January 2026

ಕಳ್ಳತನ ಮಾಡಿದ ಹಣ ಮತ್ತು ಚಿನ್ನಾಭರಣಗಳನ್ನು ದೇವರ ಹುಂಡಿಗೆ ಹಾಕಿದ ಕಳ್ಳರು!

hundi
12/04/2024

ಬೆಂಗಳೂರು: ಇವರೆಂತಹ ಹುಚ್ಚು ಭಕ್ತರು, ತಾವು ಕಳ್ಳತನ ಮಾಡಿರುವುದೇ ಅಲ್ಲದೇ ದೇವರಿಗೂ ಕಳ್ಳತನದ ಕಳಂಕವನ್ನು ಅಂಟಿಸಿರುವ ಘಟನೆಯೊಂದನ್ನು ಕೆ.ಜಿ.ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕಿರಣ್, ಆನಂದ್, ನಾನಿ ಬಂಧಿಸಿದ ಬಂಧಿತ ಆರೋಪಿಗಳಾಗಿದ್ದಾರೆ.  ಆರೋಪಿಗಳು ಚಾಮರಾಜಪೇಟೆಯ ಅಪ್ಪುರಾವ್ ರಸ್ತೆಯಲ್ಲಿರುವ ಉಮಾ ಎಂಬುವರ ಮನೆಯ ಪಕ್ಕದಲ್ಲೇ  ಕಳೆದ 15 ವರ್ಷಗಳಿಂದಲೂ ವಾಸವಿದ್ದರು.

ಮಾರ್ಚ್ 29 ರಂದು ನಕಲಿ ಕೀಲಿಕೈ ಬಳಸಿ ಉಮಾ ಅವರ ಮನೆಯಲ್ಲಿದ್ದ 6 ಲಕ್ಷ ಹಣ ಮತ್ತು 3.22 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು, ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವಸ್ಥಾನದ ಹುಂಡಿಗೆ ಹಣ ಹಾಕಿದ್ದರು.

ಘಟನೆಗೆ ಸಂಬಂಧಿಸಿದಂತೆ ಕೆ.ಜಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪ್ರಕರಣ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version