ಇವಳೆಂತಹ ತಾಯಿ!: 10 ವರ್ಷದ ಮಗಳನ್ನು ಸ್ನೇಹಿತನಿಂದಲೇ ಅತ್ಯಾಚಾರ ಮಾಡಿಸಿದ ತಾಯಿ!

ನವದೆಹಲಿ: ತಾಯಿಯೊಬ್ಬಳು ತನ್ನ 10 ವರ್ಷದ ಮಗಳನ್ನು ತನ್ನ ಸ್ನೇಹಿತನಿಂದಲೇ ಅತ್ಯಾಚಾರ ನಡೆಸಿ, ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ.
ಲೈಂಗಿಕ ದೌರ್ಜನ್ಯವನ್ನು ಸಹಿಸಲಾಗದೇ ಬಾಲಕಿ ಜನವರಿ 20ರಂದು ತನ್ನ ಮನೆ ತೊರೆದು ದೆಹಲಿಯ ಬೀದಿಗಳನ್ನು ತಿರುಗಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಮನೆ ಬಿಟ್ಟ ಬಳಿಕ ತಾಯಿಯ ಸ್ನೇಹಿತ ಬಾಲಕಿಯ 13 ವರ್ಷ ವಯಸ್ಸಿನ ಸಹೋದರನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದ್ದನು. ಹೀಗಾಗಿ ಆತನೂ ಮನೆ ತೊರೆದು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಬೀದಿಯಲ್ಲಿ ತಿರುಗಾಡುತ್ತಿದ್ದ ಬಾಲಕಿಯನ್ನು ಇದೀಗ ಸ್ಥಳೀಯರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಗೆ ಬಾಲಕಿಯನ್ನು ಒಪ್ಪಿಸಲಾಗಿದೆ. ಇನ್ನೂ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯ ವೇಳೆ ಬೆಳಕಿಗೆ ಬಂದಿದೆ.
ಬಾಲಕಿಯ ತಂದೆ 4 ವರ್ಷಗಳ ಹಿಂದೆ ಸಾವನ್ನಪ್ಪಿದ್ದನು. ಆ ನಂತರ ಮಕ್ಕಳು ತನ್ನ ತಾಯಿಯ ಜೊತೆಗೆ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ವರ್ಷ ಇಬ್ಬರು ಮಕ್ಕಳನ್ನು ಗಾಜಿಯಾಬಾದ್ ನಲ್ಲಿರುವ ತನ್ನ ತವರು ಮನೆಗೆ ತಾಯಿ ಕರೆದೊಯ್ದಿದ್ದಳು. ಅಲ್ಲಿ ತಾಯಿಯ ಸ್ನೇಹಿತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದನು. ಆಕೆಯ 13 ವರ್ಷದ ಸಹೋದರನ ಮೇಲೆ ಕೂಡ ಲೈಂಗಿಕ ದೌರ್ಜನ್ಯ ನಡೆಸಿದ್ದನು.
ಗಂಡನ ಮರಣದ ನಂತರ ಬಾಲಕಿಯ ತಾಯಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದಳು ಮತ್ತು ತನಗೆ ವಯಸ್ಸಾದ ಬಳಿಕ ತನ್ನ ಮಗಳನ್ನು ವ್ಯಾಪಾರಕ್ಕೆ ತಳ್ಳಲು ಮುಂದಾಗಿದ್ದಳು. ಸದ್ಯ ಮಗುವಿನ ತಾಯಿ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಗಾಜಿಯಾಬಾದ್ ನ ಲೋನಿ ಬಾರ್ಡರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್ ಭಾಸ್ಕರ್ ಶರ್ಮಾ, ಬಾಲಕಿ ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ರಾಜು ಎಂದು ಗುರುತಿಸಿದ್ದಾಳೆ. ಬಾಲಕಿ ನಾಪತ್ತೆಯಾದ ಬಳಿಕವೂ ತಾಯಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಆರೋಪಿ ರಾಜು ಬಾಲಕಿಯ ತಾಯಿಯನ್ನು ಬೆದರಿಸಿ ಅಪರಾಧವನ್ನು ಮುಚ್ಚಿ ಹಾಕಲು ಹಿಂಸಿಸುತ್ತಿದ್ದನು. ಬಾಲಕಿ ನಾಪತ್ತೆಯಾದ ಬಗ್ಗೆ ಯಾರ ಬಳಿಯೂ ಹೇಳದಂತೆ ಬೆದರಿಸಿದ್ದನು ಎಂದು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth