10:58 PM Thursday 11 - December 2025

ದಲಿತ ಮುಖಂಡ ರಾಜಾ ಪಲ್ಲಮಜಲು ನಿಧನ

raja pallamajalu
22/04/2021

ಬಂಟ್ವಾಳ: ಆದಿ ದ್ರಾವಿಡ ಸಮಾಜ ನಾಯಕರಾದ ರಾಜಾ ಪಲ್ಲಮಜಲು ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಬುಧವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

53 ವರ್ಷ ವಯಸ್ಸಿನ ರಾಜಾ ಮಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಲ್ಲಮಜಲು ನಿವಾಸಿಯಾಗಿದ್ದು, ರಾಜಕೀಯ ಮುಖಂಡರಾಗಿ ಸಮಾಜವನ್ನು ಪ್ರತಿನಿಧಿಸಿದ್ದರು. ತಮ್ಮ ಸಮಾಜ ಸೇವೆಯ ಮೂಲಕ ಜನಪ್ರಿಯರಾಗಿದ್ದರು.

ಪ್ರತಿ ವರ್ಷ ಜಾತಿ ಬೇಧ ಮರೆತು ಉಚಿತ ಸಾಮೂಹಿಕ ವಿವಾಹವನ್ನು ನೆರವೇರಿಸುತ್ತಿದ್ದ ರಾಜಾ ಅವರು ಬಂಟ್ವಾಳ ತಾಲೂಕಿನಲ್ಲಿ ಜನಮನ್ನಣೆಗಳಿಸಿದ್ದರು. ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಇತ್ತೀಚೆಗೆ ತಾಲೂಕಿನ ಸಿದ್ಧಕಟ್ಟೆ-ರಾಯಿಯಲ್ಲಿ ಸಿದ್ಧ ಉಡುಪುಗಳ ಮಳಿಗೆ ಸ್ಥಾಪಿಸಿದ್ದರು.

ಮೃತರು ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

Exit mobile version