ಕೆಆರ್ ಎಸ್ ಬೃಂದಾವನದಲ್ಲಿ ಕಂಡಕಂಡ ಪ್ರವಾಸಿಗರಿಗೆ ಕಚ್ಚಿದ ನಾಯಿ!: ಐವರಿಗೆ ಗಾಯ

21/08/2023
ಮಂಡ್ಯ: ನಾಯಿಯ ದಾಳಿಗೆ ಐದು ಪ್ರವಾಸಿಗರು ಗಾಯಗೊಂಡ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಉತ್ತರ ಬೃಂದಾವನದಲ್ಲಿ ನಡೆದಿದೆ.
ಕಳೆದ ರಾತ್ರಿ ಉತ್ತರ ಬೃಂದಾವನದಲ್ಲಿ ನಾಯಿ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆ ಕಂಡ ಕಂಡ ಪ್ರವಾಸಿಗರ ಮೇಲೆ ದಾಳಿ ನಡೆಸಿದೆ.
ಏಕಾಏಕಿ ನಡೆದ ದಾಳಿಯಿಂದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ಇದೇ ವೇಳೆ ಭದ್ರತಾ ಸಿಬ್ಬಂದಿ ನಾಯಿಯನ್ನು ಸ್ಥಳದಿಂದ ಓಡಿಸಿದ್ದಾರೆಂದು ತಿಳಿದು ಬಂದಿದೆ.
ಇನ್ನೂ ಇದೊಂದು ಹುಚ್ಚುನಾಯಿ ಎಂದು ಕೆಲವರು ಹೇಳುತ್ತಿದ್ದಾರೆ, ಆದರೆ ಈ ಬಗ್ಗೆ ಸ್ಪಷ್ಟತೆ ದೊರಕಿಲ್ಲ, ಸದ್ಯ ಗಾಯಾಳುಗಳನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.