8:48 AM Thursday 29 - January 2026

ಟ್ರಾಫಿಕ್ ಜಾಮ್ ನಿಂದ ತಪ್ಪಿಸಿಕೊಳ್ಳಲು ಈತ ಎಂತಹ ಪ್ಲಾನ್ ಮಾಡಿದ್ದಾನೆ ನೋಡಿ! | ವಿಡಿಯೋ ನೋಡಿ

bike
09/04/2021

ಭಾರತೀಯರು ಕೆಲವು ಸಮಯದಲ್ಲಿ ಮಾಡುವ ಸಾಹಸ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಇರುತ್ತದೆ. ಶಾರ್ಟ್ ಕಟ್ ನಲ್ಲಿ ಯಾವ ಕೆಲಸವನ್ನಾದರೂ ಮುಗಿಸುತ್ತಾರೆ ಮತ್ತು ತಮ್ಮ ಕೆಲಸ ಶಾರ್ಟ್ ಕಟ್ ನಲ್ಲಿ ಆಗದೇ ಹೋದರೆ ಸಾಕಷ್ಟು  ಸಮಯ ನರಕ ಅನುಭವಿಸಲೇ ಬೇಕು ಎನ್ನುವಂತಾಗುತ್ತದೆ.

ಇಷ್ಟೆಲ್ಲ ಪೀಠಿಕೆ ಯಾಕೆ ಗೊತ್ತಾ? ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ತೀವ್ರ ವಾಹನ ದಟ್ಟನೆಯಲ್ಲಿ ದ್ವಿಚಕ್ರ ವಾಹನ ಚಾಲಕ ಮಾಡಿದ ಕೆಲಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ಆ ದ್ವಿಚಕ್ರ ವಾಹನ ಚಾಲಕನಿಗೆ ಏನು ಕಷ್ಟವೋ ಗೊತ್ತಿಲ್ಲ. ಆತುರಾತುರವಾಗಿ ಆತ ಸ್ಥಳದಿಂದ ತೆರಳಿದ್ದಾನೆ. ಅದು ಹೇಗೆ ಗೊತ್ತಾ. ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಟ್ರಕ್ ನ ಅಡಿಯಲ್ಲಿ ತನ್ನ ದ್ವಿಚಕ್ರ ವಾಹನವನ್ನು ಕೊಂಡೊಯ್ದು ವಾಹನ ದಟ್ಟಣೆಯೊಂದ ಎಸ್ಕೇಪ್ ಆಗಿದ್ದಾನೆ.

ಸಿನಿಮಾಗಳಲ್ಲಿ ನಟರು ಸ್ಟಂಟ್ ಮಾಡುವುದನ್ನು ನೋಡಿದ್ದೇವೆ. ಲಾರಿಗಳಡಿಯಲ್ಲಿ ಬೈಕ್ ಅಡ್ಡ ಹಾಕಿ ಮುಂದೆ ಸಂಚರಿಸುವಂತೆಯೇ, ಈ ದ್ವಿಚಕ್ರ ವಾಹನ ಸವಾರ ಕೂಡ ಕುಳಿತುಕೊಂಡೇ ಆ ಬದಿಗೆ ಸಂಚರಿಸಲು ಸಾಧ್ಯವೇ ಎಂದು ಪ್ರಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಿಲ್ಲ ಎಂದು ತಿಳಿಯುತ್ತಿದ್ದಂತೆಯೇ ವಾಹನದಿಂದ ಕೆಳಗೆ ಇಳಿದು ಟ್ರಕ್ ನಡಿಯಲ್ಲಿ ಸ್ಕೂಟರ್ ನ್ನು ತಳ್ಳಿಕೊಂಡು ಹೋಗಿದ್ದಾನೆ. ಆ ಸಮಯದಲ್ಲಿ ಎಲ್ಲಾದರೂ ಟ್ರಾಫಿಕ್ ಕಡಿಮೆ ಆಗಿದೆ ಎಂದು ಟ್ರಕ್ ಚಾಲಕ ವಾಹನ ಚಲಾಯಿಸಿದ್ದರೆ ಆತನ ಗತಿಯೇನಾಗುತ್ತಿತ್ತು ಎಂದೂ ಯೋಚಿಸಲೇ ಬೇಕು ಅಲ್ಲವೇ?

YouTube video player

ಇತ್ತೀಚಿನ ಸುದ್ದಿ

Exit mobile version