11:33 PM Thursday 21 - August 2025

ಟ್ವಿಟರ್ ನಲ್ಲಿ ಓದುವ ಮಿತಿ ಹೆಚ್ಚಳವಂತೆ: ಎಲೋನ್‌ ಮಸ್ಕ್‌ ಹೇಳಿದ್ದೇನು ಗೊತ್ತಾ..?

02/07/2023

ಕೆಲ ದಿನಗಳ ಹಿಂದೆ ಟ್ವಿಟ್ಟರ್ ಮುಖ್ಯಸ್ಥ ಎಲೋನ್‌ ಮಸ್ಕ್‌ ಅವರು ಒಂದು ದಿನಕ್ಕೆ ಟ್ವಿಟ್ಟರ್‌ ನಲ್ಲಿ ಇಂತಿಷ್ಟೇ ಪೋಸ್ಟ್‌ಗಳನ್ನ ಓದಬಹುದು ಎಂದು ಮಿತಿ ವಿಧಿಸಿದ್ದರು.

ಇದೀಗ ಮತ್ತೆ ಓದುವ ಮಿತಿಯನ್ನು ಹೆಚ್ಚಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಶನಿವಾರ ಜಗತ್ತಿನಾದ್ಯಂತ ಕೆಲಕಾಲ ಟ್ವಿಟ್ಟರ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಜನ ಅಸಮಾಧಾನ ಹೊರಹಾಕಿದ್ದರು. ಬಳಿಕ ಮಸ್ಕ್‌ ಬದಲಾವಣೆಯ ಅಸ್ತ್ರ ಹೂಡಿದ್ದರು.

ಅನಗತ್ಯ ಡೇಟಾ ಬಳಕೆ ಮಾಡೋದನ್ನ ತಪ್ಪಿಸುವುದು, ಕೆಲ ಪೋಸ್ಟ್‌ ಗಳ ಮೂಲಕ ಕೆರಳಿಸುವ ಯತ್ನ ಮಾಡುತ್ತಿರುವುದು ಸೇರಿದಂತೆ ಹಲವು ವಿಷಯಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಟ್ವಿಟ್ಟರ್‌ ಪ್ರತಿದಿನದ ಪೋಸ್ಟ್‌ ಓದಲು ಮಿತಿ ವಿಧಿಸಿತ್ತು. ಇದು ತಾತ್ಕಾಲಿಕ ಕ್ರಮವಾಗಿದೆ. ಮುಂದೆ ಟ್ವಿಟ್ಟರ್‌ ಬಳಕೆದಾರರ ಪ್ರತಿಕ್ರಿಯೆ ನೋಡಿಕೊಂಡು ಬದಲಾವಣೆ ತರುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು.

ವೆರಿಫೈ ಆದ ಖಾತೆಗಳಿಗೆ ದಿನಕ್ಕೆ 6,000 ಪೋಸ್ಟ್‌ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 600 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಬಳಕೆದಾರರು ದಿನಕ್ಕೆ 300 ಪೋಸ್ಟ್‌ಗಳನ್ನು ಓದಲು ಮಿತಿ ಇರುತ್ತದೆ ಎಂದು ಶನಿವಾರ ಮಸ್ಕ್‌ ಹೇಳಿದ್ದರು.

ಈ ಕುರಿತು ಭಾನುವಾರ ಮತ್ತೊಂದು ಟ್ವೀಟ್‌ ಮಾಡಿರುವ ಅವರು, ಓದುವ ಮಿತಿಯಲ್ಲಿ ಕೊಂಚ ಮಾರ್ಪಾಡು ಮಾಡುವುದಾಗಿ ಘೋಷಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ದೈನಂದಿನ ಪೋಸ್ಟ್‌ ಓದುವ ಮಿತಿಯನ್ನು ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ವೆರಿಫೈ ಖಾತೆಗಳ ಮಿತಿಯನ್ನು 8,000 ಪೋಸ್ಟ್‌ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 800 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಮಿತಿಯನ್ನು 400 ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version