11:53 PM Thursday 21 - August 2025

ಹೀಗೂ ಉಂಟಾ..! ಈ ದೇಶದಲ್ಲಿ ಮೊಸಳೆಯನ್ನು ಪ್ರೀತಿಸಿ ಮದುವೆ ಆದ ಮೇಯರ್..!

02/07/2023

ಮನುಷ್ಯ – ಮನುಷ್ಯ ಮದುವೆ ಆಗೋದು ನಿಯಮ. ಆದರೆ ಪ್ರಾಣಿ-ಪ್ರಾಣಿ ಮದುವೆ ಎಂಬುದೇ ಇಲ್ಲ. ಆದರೆ ಪ್ರಾಣಿಯನ್ನು ಮನುಷ್ಯ ಮದುವೆ ಆಗೋದು ಉಂಟಾ..? ಅಚ್ಚರಿಯಾದರೂ ಇದು ಸತ್ಯ ಕಣ್ರೀ.

ದಕ್ಷಿಣ ಮೆಕ್ಸಿಕೋ ಪಟ್ಟಣದ ಮೇಯರ್‌ವೊಬ್ಬರು ಮೊಸಳೆಯನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಿತ್ರ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಹೌದು. ಮೆಕ್ಸಿಕೋದ ಟೆಹುವಾಂಟೆಪೆಕ್ ಇಸ್ತಮಸ್‌ನಲ್ಲಿರುವ ಸ್ಯಾನ್ ಪೆಡ್ರೊ ಹುವಾಮೆಲುಲಾದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಅಲಿಸಿಯಾ ಆಡ್ರಿಯಾನಾ ಹೆಸರಿನ ಮೊಸಳೆಯನ್ನು ಮದುವೆಯಾಗಿದ್ದಾರೆ. ಆ ಮೂಲಕ ತಮ್ಮ ಪೂರ್ವಜರ ಆಚರಣೆಗಳನ್ನು ಮುಂದುವರಿಸಿದ್ದಾರೆ.

ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ಹೀಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪ್ರೀತಿ ಇಲ್ಲದೆ ನಾನು ಮದುವೆಯಾಗಲು ಸಾಧ್ಯವಿಲ್ಲ. ನಾನು ಈ ರಾಜಕುಮಾರಿ ಹುಡುಗಿಯೊಂದಿಗೆ ಮದುವೆಯಾಗಿದ್ದೇನೆ ಎಂದು ಸೋಸಾ ತಿಳಿಸಿದ್ದಾರೆ.

ಮದುವೆಯಂತಹ ಸಂಬಂಧಗಳ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಇಲ್ಲಿನ ಎರಡು ಸ್ಥಳೀಯ ಜನಾಂಗಗಳು ಪುರುಷ ಮತ್ತು ಹೆಣ್ಣು ಸರೀಸೃಪದೊಂದಿಗೆ ವಿವಾಹ ಮಾಡುವ ಪದ್ಧತಿ ಆಚರಿಸಿಕೊಂಡು ಬಂದಿದೆ. ಆದ್ದರಿಂದ ಮೆಕ್ಸಿಕೋ ಮೇಯರ್‌ ಮೊಸಳೆಯನ್ನು ಮದುವೆ ಆಗಿದ್ದಾರೆ.

ಮದುವೆಯ ಸಮಾರಂಭಕ್ಕೆ ಮೊದಲು ಈ ಸರೀಸೃಪವನ್ನು ಮನೆ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ನಿವಾಸಿಗಳು ಅದನ್ನು ಹಿಡಿದುಕೊಂಡು ನೃತ್ಯ ಮಾಡುತ್ತಾರೆ. ವಿವಾಹ ಸಂದರ್ಭದಲ್ಲಿ ಅದಕ್ಕೂ ಬಣ್ಣಬಣ್ಣದ ಬಟ್ಟೆ ತೊಡಿಸುತ್ತಾರೆ. ಇದು ಇಲ್ಲಿನ ನಿಯಮವಂತೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version