ತಹಶೀಲ್ದಾರ್ ನ್ನು ಹಿಗ್ಗಾ ಮುಗ್ಗಾ ತರಾಟೆಗೆತ್ತಿಕೊಂಡ ಕಾಂಗ್ರೆಸ್ ಮಾಜಿ ಶಾಸಕ: ವಿಡಿಯೋ ವೈರಲ್

ಸರ್ಕಾರಿ ಅಧಿಕಾರಿಗೆ ಕಾಂಗ್ರೆಸ್ ಮಾಜಿ ಶಾಸಕ ಬೈಯ್ಯುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಬಳಿಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಲು ಕಾಂಗ್ರೆಸ್ ನಾಯಕರು ತೆರಳಿದ್ದರು. ಈ ವೇಳೆ ತಹಶಿಲ್ದಾರ್ ಇಲ್ಲದ್ದನ್ನ ಕಂಡು ಮಾಜಿ ಶಾಸಕ ವಸಂತ ಬಂಗೇರಾ ಕಿಡಿಕಾರಿದ್ದು, ತಹಶೀಲ್ದಾರ್ ಗೆ ಕರೆ ಮಾಡಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
‘ನಾವು ಪ್ರತಿಭಟನೆ ಮಾಡಿ ಮನವಿ ಕೊಡ್ತೀವಿ ಅಂತ ನಿಮಗೆ ಗೊತ್ತಿಲ್ವಾ?’ ‘ನೀವು ಬೆಂಗಳೂರಿಗೆ ಹೋಗಿ ಅಥವಾ ಅದರಾಚೆ ಹೋಗಿ ನನಗೆ ಗೊತ್ತಿಲ್ಲ’. ‘ನಿಮಗೆ ಹರೀಶ್ ಪೂಂಜಾನದ್ದು ಮಾತ್ರ ನೆನಪಿರೋದಾ? ನಮ್ಮದಿಲ್ವಾ?’ ‘ನಿಮಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಗೊತ್ತೇ ಇಲ್ವಾ?’ ‘ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇದೆ ಅಂತ ಭಾವಿಸಿದ್ದೀರಾ?’ ‘ಗೌರವ ಕೊಡಲು ಕಲೀರಿ, ನೀವು ಕೊಟ್ರೆ ನಾನು ಕೊಡ್ತೇನೆ’ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನವರಿಗೆ ಗೌರವ ಕೊಟ್ರೆ ನಾವು ಬೇರೆಯವರಿಗೆ ಕೊಡ್ತೇವೆ. ನೀವು ಇಲ್ಲಿ ಇಲ್ಲದ್ದು ತಪ್ಪು. ಇದು ಕಾಂಗ್ರೆಸ್ ಮತ್ತು ಸರ್ಕಾರಕ್ಕೆ ಮಾಡಿದ ಅನ್ಯಾಯ’. ‘ನೀವೊಬ್ಬ ದಂಡಾಧಿಕಾರಿ ಅಲ್ವಾ? ಈಗ ದಂಡ ಅಧಿಕಾರಿ ಆದ್ರೀ’. ‘ನೀವು ಮಾತನಾಡಿದ್ದನ್ನ ನಾನು ಕೇಳಲ್ಲ, ನಾನು ಹೇಳಿದ್ದು ಮಾತ್ರ ನೀವು ಕೇಳಬೇಕು’. ‘ನಿಮ್ಮ ತಾಲೂಕು ಕಚೇರಿ ಕ್ಲೀನ್ ಮಾಡಿ, ಏಜೆಂಟ್ ಗಳನ್ನ ಹೊರಗೆ ಹಾಕಿ’ ‘ಹೊರಗೆ ಹಾಕದೇ ಇದ್ರೆ ನಾನು ನಿಮ್ಮನ್ನು ನೆಮ್ಮದಿಯಾಗಿ ಕೂರಲು ಬಿಡಲ್ಲ’ ಎಂದು ಕಿಡಿಕಾರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw