4:05 AM Thursday 6 - November 2025

ನಡು ರಾತ್ರಿ ಫುಲ್ ಟೈಟ್: ರಸ್ತೆಯ ಮೇಲೆಯೇ ಬೈಕ್ ಸವಾರ  ಸ್ಲೀಪಿಂಗ್ | ಮುಂದೆ ನಡೆದದ್ದೇನು?

chikkamagaluru
09/10/2023

ಚಿಕ್ಕಮಗಳೂರು:  ಕುಡಿತದ ಮತ್ತಿನಲ್ಲಿ ಬೈಕ್ ಓಡಿಸಲು ಸಾಧ್ಯವಾಗದೇ ಯುವಕನೋರ್ವ ನಡು ರಸ್ತೆಯಲ್ಲೇ ಮಲಗಿದ ಘಟನೆ  ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಬೈಕ್ ಸವಾರ ನಡು ರಾತ್ರಿ ಫುಲ್ ಟೈಟ್ ಆಗಿದ್ದಾನೆ. ಕುಡಿತದ ಮತ್ತಿನಿಂದ ಬೈಕ್ ಓಡಿಸಲಾಗದೇ ನಡು ರಸ್ತೆಯಲ್ಲೇ ನಿದ್ದೆಗೆ ಜಾರಿದ್ದಾನೆ.

ಅತ್ತ  ಬೇರೆ ವಾಹನ ಚಾಲಕರು ಬೈಕ್ ಇಂಡಿಕೇಟರ್ ನ ಬೆಳಕು ಕಂಡು, ರಸ್ತೆ ಮಧ್ಯೆ ಬೈಕ್ ಹಾಗೂ ಯುವಕ ಬಿದ್ದಿರುವುದನ್ನು ಗಮನಿಸಿದ್ದಾರೆ. ಅಪಘಾತವಾಗಿರಬಹುದು ಎಂದು ಭಾವಿಸಿ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆ್ಯಂಬುಲೆನ್ಸ್ ಬರುತ್ತಿದ್ದಂತೆಯೇ ಯುವಕ ಎದ್ದುನಿಂತಿದ್ದಾನೆ.

ಬೈಕ್ ಇಂಡಿಕೇಟರ್ ಆನ್ ಇದ್ದಿದ್ದರಿಂದ ಯುವಕನ ಜೀವ ಉಳಿದಿದೆ. ಇಲ್ಲವಾದರೆ ಯಾವುದಾದರೂ ವಾಹನ ಈತನ ಮೇಲೆ ಹರಿಯುತ್ತಿತ್ತು. ಸದ್ಯ ಬೈಕ್ ಸವಾರನನ್ನು ಬಣಕಲ್ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version