ಪ್ರಧಾನಿ ಮೋದಿಯೊಂದಿಗೆ ಗಣೇಶ ‘ಚಾಯ್ ಪೇ ಚರ್ಚಾ’ ಪ್ರತಿಮೆ ಸ್ಥಾಪನೆ: ಈಗ ರಾಜಕೀಯ ವಿವಾದ!
ಕೊಲ್ಕತ್ತಾ: ಇಲ್ಲಿನ ಹೌರಾದಲ್ಲಿ ನಿರ್ಮಿಸಲಾದ ಗಣೇಶ ಉತ್ಸವದ ಪೆಂಡಾಲ್ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗಣೇಶ ಒಟ್ಟಿಗೆ ಚಹಾ ಕುಡಿಯುವ ಥೀಮ್ ಅನ್ನು ಪ್ರದರ್ಶಿಸಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಬೆಲೂರು ಬಜಾರ್ ನಲ್ಲಿ ಆಯೋಜಿಸಲಾಗಿರುವ ಈ ಗಣೇಶ ಪೆಂಡಾಲ್ ನಲ್ಲಿ ಪ್ರಧಾನಿ ಮೋದಿ ಮತ್ತು ಗಣೇಶ ಒಟ್ಟಿಗೆ ಕುಳಿತುಕೊಂಡು ‘ಚಾಯ್ ಪೇ ಚರ್ಚಾ’ ಮಾದರಿಯಲ್ಲಿ ಚಹಾ ಕುಡಿಯುತ್ತಿರುವ ಚಿತ್ರವನ್ನು ಪ್ರದರ್ಶಿಸಲಾಗಿದೆ. ಇದರ ಹಿನ್ನೆಲೆಯಲ್ಲಿ “ಹಿಂದೂ ರಾಷ್ಟ್ರ” ಎಂಬ ಬರಹದೊಂದಿಗೆ ಭಾರತದ ನಕ್ಷೆ ಹಾಗೂ ಹಿಂದೂ ಧ್ವಜವನ್ನು ಅಳವಡಿಸಲಾಗಿದೆ. ಈ ದೃಶ್ಯಗಳ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಪೆಂಡಾಲ್ ವಿನ್ಯಾಸವನ್ನು ಪ್ರಚಾರಕ (ಪ್ರಮೋಟರ್) ಆಗಿರುವ ಕೊಕನ್ ಕನ್ರಾ ಎಂಬುವವರು ತಮ್ಮ ಸ್ವಂತ ಯೋಚನೆಯಂತೆ ರೂಪಿಸಿದ್ದು, ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ರಾಜಕೀಯ ಉದ್ದೇಶ ಹೊಂದಿರುವ ಉದ್ದೇಶದಿಂದ ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ (TMC) ಶಾಸಕ ಅರೂಪ್ ರಾಯ್, ಬಿಜೆಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಕೆಲವರು ಹೈಕಮಾಂಡ್ ಮೆಚ್ಚಿಸಲು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ತೀವ್ರವಾಗಿ ಆಕ್ಷೇಪಿಸಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ, ಹೌರಾ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಒಂಪ್ರಕಾಶ್ ಸಿಂಗ್ ಈ ಥೀಮ್ ನಲ್ಲಿ ತಪ್ಪೇನೂ ಇಲ್ಲ ಎಂದಿದ್ದರೂ, ಪಕ್ಷದ ವತಿಯಿಂದ ಚರ್ಚಿಸಿ ಅಗತ್ಯವಿದ್ದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























