6:20 AM Wednesday 10 - December 2025

ಅನುಷ್ಕಾ ಶೆಟ್ಟಿ ಭಯಾನಕ ಲುಕ್: ಅನುಷ್ಕಾ ಶೆಟ್ಟಿ ಹುಟ್ಟುಹಬ್ಬಕ್ಕೆ ಘಾಟಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ

Ghaati Movie
07/11/2024

ಖ್ಯಾತ ನಟಿ ಅನುಷ್ಕಾ ಶೆಟ್ಟಿ ಇಂದು(ನ.7) ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅನುಷ್ಕಾ ನಾಯಕಿಯಾಗಿ ನಟಿಸಿರುವ ಘಾಟಿ ಸಿನಿಮಾದ ಅಪ್ ಡೇಟ್ ದೊರಕಿದೆ.

ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ದಿನ ಘಾಟಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಘಾಟಿ ಸಿನಿಮಾದ ವಿಡಿಯೋ ಝಲಕ್ ಅನ್ನೂ ಯುವಿ ಕ್ರಿಯೇಷನ್ಸ್ ಬಿಡುಗಡೆ ಮಾಡಲಿದೆ.

ಯುವಿ ಕ್ರಿಯೇಷನ್ಸ್ ಇಂದು ಅನುಷ್ಕಾ ಶೆಟ್ಟಿಯ ರೌದ್ರ ಮುಖದ ಫೋಟೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದೆ. ಘಾಟಿ ಸಿನಿಮಾದಲ್ಲಿ ನಟಿಯು ಈ ಭಯಂಕರ ರೂಪದಲ್ಲಿ ಅಬ್ಬರಿಸುವ ಸೂಚನೆಯಿದೆ.

ಅನುಷ್ಕಾ ಶೆಟ್ಟಿಯ ಈ ಫಸ್ಟ್ಲುಕ್ ನೋಡಿ ಅಭಿಮಾನಿಗಳು ವಾಹ್ ಎಂದಿದ್ದಾರೆ. ಈ ಚಿತ್ರದಲ್ಲಿ ರಕ್ತಸಿಕ್ತ ಮುಖದಲ್ಲಿ ಅನುಷ್ಕಾ ಕಾಣಿಸಿದ್ದಾರೆ. ಕೈಯಲ್ಲಿ ಮಾರಿಜುನಾ ಸೇದಿಕೊಂಡು ಕಣ್ಣಲ್ಲಿ ಬೆಂಕಿ ಸುರಿಸಿಕೊಂಡು, ಹಣೆಯಲ್ಲಿ ರಕ್ತ ಸುರಿಸಿಕೊಂಡು ಭಯಾನಕ ನೋಟ ಬೀರಿದ್ದಾರೆ. ಮೂಗಿಗೆ ಎರಡು ರಿಂಗ್ ಗಳಿವೆ. ಕೈಯಲ್ಲಿ ಗಾಜು, ಹಣೆಯಲ್ಲಿ ಬಿಂದಿ ಇದೆ. ಇದಕ್ಕಿಂತ ಹೆಚ್ಚಿನ ಸುಳಿವನ್ನು ನೀಡಲಾಗಿಲ್ಲ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ

Exit mobile version