1:00 PM Wednesday 17 - September 2025

ಜ್ಞಾನವಾಪಿ ಪ್ರಕರಣ: ಪೂಜೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

26/02/2024

ವಾರಣಾಸಿಯ ಜ್ಞಾನವಾಪಿ ಆವರಣದಲ್ಲಿರುವ ದಕ್ಷಿಣದ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ವಾರಣಾಸಿ ನ್ಯಾಯಾಲಯವು ದಕ್ಷಿಣ ನೆಲಮಾಳಿಗೆಯೊಳಗೆ ಪೂಜೆ ಮಾಡಲು ಅವಕಾಶ ನೀಡಿತ್ತು.

ಜ್ಞಾನವಾಪಿ ಮಸೀದಿಯ ‘ವ್ಯಾಸ್ ತೆಹ್ಖಾನಾ’ದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

ಈ ಹಿಂದೆ ಜನವರಿ 31ರಂದು ವಾರಣಾಸಿ ನ್ಯಾಯಾಲಯವು ಹಿಂದೂ ಭಕ್ತರಿಗೆ ಜ್ಞಾನವಾಪಿ ಆವರಣದ ದಕ್ಷಿಣ ನೆಲಮಾಳಿಗೆಯೊಳಗೆ ಪೂಜೆ ಮಾಡಲು ಅವಕಾಶ ನೀಡಿತ್ತು.
ಭಕ್ತರು ಪೂಜೆ ಸಲ್ಲಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದ ವಾರಣಾಸಿ ನ್ಯಾಯಾಲಯ, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ಗೆ ಅರ್ಚಕರನ್ನು ನಾಮನಿರ್ದೇಶನ ಮಾಡುವಂತೆಯೂ ಸೂಚಿಸಿತ್ತು.

ಇದರ ಬೆನ್ನಲ್ಲೇ ಮಸೀದಿ ಸಮಿತಿಯು ವಾರಣಾಸಿ ನ್ಯಾಯಾಲಯದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದು, ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಫೆಬ್ರವರಿ 15ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಈಗ ಅರ್ಜಿಯನ್ನೇ ವಜಾಗೊಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version