ಜೊತೆಯಾಗಿ ಎಣ್ಣೆ ಪಾರ್ಟಿ ಮಾಡಿ, ಬಿಯರ್ ಬಾಟಲಿಯಿಂದ ಹೊಡೆದಾಡಿದ ಎಂಜಿನಿಯರ್ ಗಳು!

engineers
30/05/2024

ತುಮಕೂರು: ಪಾವಗಡ ಪಟ್ಟಣದ ಹೊರವಲಯದಲ್ಲಿ ಕುಡಿದ ಮತ್ತಿನಲ್ಲಿ ಕೆಪಿಟಿಸಿಎಲ್ ಎಂಜಿನಿಯರ್ ಗಳು ಬಿಯರ್ ಬಾಟಲಿಂದ ಪರಸ್ಪರ ಹೊಡೆದುಕೊಳ್ಳುವ ವಿಡಿಯೋ ವೈರಲ್ ಆಗಿದೆ.

ಕಳೆದ ಗುರುವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ತುಮಕೂರು ರಸ್ತೆಯ ಮಾರ್ಗದ ರಾಯಲ್ ರೆಸಾರ್ಟ್ ಹಿಂಭಾಗ ನಾಲ್ವರು ನೌಕರರು ಹಗಲು ಹೊತ್ತಲ್ಲೇ ಎಣ್ಣೆ ಪಾರ್ಟಿ ಮಾಡಿದ್ದರು.

ಪಾರ್ಟಿ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಹೊಡೆದಾಟಕ್ಕೆ ತಿರುಗಿದೆ. ಕೆ.ಪಿ.ಟಿ.ಸಿ.ಎಲ್. ಜೂನಿಯರ್ ಎಂಜಿನಿಯರ್ ಗಳಾದ ಶ್ರೀನಿವಾಸ್, ವಾದಿರಾಜ್, ನಡುವೆ  ಪರಸ್ಪರ ಹಲ್ಲೆ ನಡೆದಿದೆ ಎನ್ನಲಾಗಿದೆ. ಬಿಯರ್ ಬಾಟಲಿಯಿಂದ ಪರಸ್ಪರ ಹೊಡೆದಾಡುತ್ತಿರುವುದು ಮತ್ತು ಈ ಇಬ್ಬರನ್ನು ಸಮಾಧಾನ ಮಾಡಲು ಬೆಸ್ಕಾಂ ಸಿಬ್ಬಂದಿ ನರಸಿಂಹಮೂರ್ತಿ ಮತ್ತು ಸಂತೋಷ್ ಹರಸಾಹಸಪಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಇದೇ ಸಂದರ್ಭದಲ್ಲಿ ಇನ್ನೊಬ್ಬ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಮಾಲ್ಗುಂಡ ಇದ್ದರು. ತಲೆಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಸಹ, ತನ್ನ ತಲೆಗೆ ಹೊಡೆದವನನ್ನು ಹುಡುಕಿ ಹುಡುಕಿ ಮತ್ತೆ  ಬಿಯರ್ ಬಾಟಲಿನಿಂದ ಓಡಿಸಿಕೊಂಡು ಹೋಗಿ ತಲೆಗೆ ಹೊಡೆಯಲು ಯತ್ನಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಹೊಡೆದಾಟದ ದೃಶ್ಯ ವೈರಲ್ ಆಗಿದ್ದರೂ ಯಾರು ಸಹ ಪೊಲೀಸ್ ಠಾಣೆ ಮೆಟ್ಟಿಲೇರಿಲ್ಲ ಎನ್ನಲಾಗಿದೆ. ಪೊಲೀಸ್ ಠಾಣೆವರೆಗೆ ಈ ಪ್ರಕರಣ ಹೋದರೆ ಕೆಲಸ ಕಳೆದುಕೊಳ್ಳಬೇಕಾದೀತು ಎನ್ನುವ ಭೀತಿಯಿಂದ ನಾಲ್ವರೂ ಸುಮ್ಮನಿದ್ದಾರೆ ಎನ್ನಲಾಗಿದೆ.

ಆದರೂ, ಈ ನಾಲ್ವರಿಗೂ, ಮೇಲಾಧಿಕಾರಿಗಳು, ನೋಟಿಸ್ ನೀಡಿ, ವಿಡಿಯೋ ವೈರಲ್ ಬಗ್ಗೆ ಕಾರಣ ಕೇಳಿದ್ದಾರೆ.  ಮಾಹಿತಿಗಳ ಪ್ರಕಾರ ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಈಗ ವಿಡಿಯೋ ವೈರಲ್ ಆಗಿದೆ ಎಂದು ಹೇಳಲಾಗಿದೆ. ಘಟನೆಯಿಂದ ಪಾವಗಡ ತಾಲೂಕಿನ ಬೆಸ್ಕಾಂ ಇಲಾಖೆ ಮುಜುಗರಕ್ಕೆ ಒಳಗಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version