ಕೆಎಸ್ ಆರ್ ಟಿಸಿ ಬಸ್ ಲಾರಿ ನಡುವೆ ಭೀಕರ ಅಪಘಾತ: ಐವರು ಪ್ರಯಾಣಿಕರ ದಾರುಣ ಸಾವು

11/09/2023
ಚಿತ್ರದುರ್ಗ: ಕೆಎಸ್ ಆರ್ ಟಿಸಿ ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿದ ದಾರುಣ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕು ಕೇಂದ್ರದಿಂದ ಹಿರಿಯೂರಿಗೆ ಸಾಗುವ, ಬೀದರ್ – ಶ್ರೀರಂಗಪಟ್ಟಣ ರಸ್ತೆ ರಾ. ಹೆ. 14ರಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರು ಮೂಲದ ಪಾರ್ವತಮ್ಮ(45) , ಮಸ್ಕಿಯ ರಮೇಶ್(40), ರಾಯಚೂರಿನ ಮಾಬಮ್ಮ, ಮಾನ್ವಿಯ ನರಸಣ್ಣ ಎಂದು ಗುರುತಿಸಲಾಗಿದೆ. ಇನ್ನೂ ಒಬ್ಬರ ಗುರುತು ಪತ್ತೆಯಾಗಿಲ್ಲ.
ಗಾಯಗೊಂಡ ಎಂಟು ಜನರಲ್ಲಿ ಐವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರಿಗೆ ಚಳ್ಳಕೆರೆ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.