ಪಬ್, ಬಾರ್ ಗಳಿಗೆ ಅಬಕಾರಿ ಕಾರ್ಯಾಚರಣೆ ಮಾಡಿದರೆ ಬಿಜೆಪಿಯವರು ಹೇಗೆ ಟಾರ್ಗೆಟ್ ಆಗುತ್ತಾರೆ?: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ

laxmi hebbalkar
14/08/2023

ಉಡುಪಿಯ ಮಣಿಪಾಲ ಪಬ್, ಬಾರ್ ಗಳಿಗೆ ಅಬಕಾರಿ ಕಾರ್ಯಾಚರಣೆ ಮಾಡಿದರೆ ಬಿಜೆಪಿಗೆ ಏನು ಸಂಬಂಧ. ಬಿಜೆಪಿಯವರು ಹೇಗೆ ಟಾರ್ಗೆಟ್ ಆಗುತ್ತಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಯಾರನ್ನು ಟಾರ್ಗೆಟ್ ಮಾಡಲ್ಲ. ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಲೈಸನ್ಸ್ ತೆಗೆದುಕೊಂಡು ಕ್ಲಬ್ ಪಬ್ ನಡೆಸಿದರೂ ಎಲ್ಲದಕ್ಕೂ ಒಂದು ನಿಯಮ, ಸಮಯ ನಿಗದಿಯಾಗಿರುತ್ತದೆ. ಕಾನೂನು ಚೌಕಟ್ಟಿನಲ್ಲಿ ಮಾಡಿದರೆ ಯಾರೂ ವಿರೋಧ ಮಾಡುವುದಿಲ್ಲ. ಸರಕಾರಕ್ಕೆ ಯಾರನ್ನು ಟಾರ್ಗೆಟ್ ಮಾಡುವ ಅನಿವಾರ್ಯ ಸ್ಥಿತಿಯಿಲ್ಲ ಎಂದರು.

ಕಮಿಷಯ್ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಮೂರು ತಿಂಗಳಲ್ಲಿ ನಮ್ಮ ಸರ್ಕಾರ ಯಾವುದೇ ಹೊಸ ಯೋಜನೆ ಮಾಡಿಲ್ಲ. ಹೊಸ ಯೋಜನೆಗಳನ್ನು ಮಾಡಿದರೆ ಮಾತ್ರ ಕಮಿಷನ್ ವಿಚಾರ ಬರುತ್ತದೆ. ಆನ್ ಗೋಯಿಂಗ್ ಕಾಮಗಾರಿಗಳು ನಡೆಯುತಿತಿರುವಾಗ ಕಮಿಷನ್ ವಿಚಾರ ಎಲ್ಲಿಂದ ಬರುತ್ತದೆ. ನಾವು ಕಮಿಷನ್ ಕೇಳಿರುವ ಯಾವುದೇ ಪ್ರಕರಣಗಳು ಇಲ್ಲ. ಬಿಬಿಎಂಪಿ ವಿಚಾರದಲ್ಲಿ ಬಂದಿರುವ ಆರೋಪ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಉಡುಪಿ ವಿಡಿಯೋ ಪ್ರಕರಣ ಸಿಐಡಿ ತನಿಖೆ ಯಾವ ಹಂತದಲ್ಲಿದೆ ಎಂದು ಹೇಳಲು ಆಗಲ್ಲ. ಈ ಪ್ರಕರಣದ ವಿಚಾರದಲ್ಲಿ ಸರ್ಕಾರ ,ಮುಖ್ಯಮಂತ್ರಿಗಳು ,ಪೊಲೀಸ್ ಇಲಾಖೆ 24 ಗಂಟೆ ಅಲರ್ಟ್ ಆಗಿದೆ. ಹೆಚ್ಚಿನ ತನಿಖೆಗೆ ಬೇಡಿಕೆ ಇತುತಿ ,ಮುಖ್ಯಮಂತ್ರಿಗಳು ಸಿಐಡಿ ಗೆ ಕೊಟ್ಟಿದ್ದಾರೆ. ಸಿಐಡಿ ತಂಡ ಕಾಲೇಜಿಗೆ ಭೇಟಿ ಕೊಟ್ಟಿದೆ,ಸಂತ್ರಸೆತಿಯ ಜೊತೆ ಮಾತುಕತೆ ನಡೆಸಿದೆ. ತನಿಖೆ ಪ್ರಗತಿಯಲ್ಲಿದೆ. ಎಂದರು.

ಸಿಐಡಿ ತನಿಖೆ ಬಗ್ಗೆ ವಿಶ್ವಾಸವಿಲ್ಲ ಎಂದಿರುವ ಉಡುಪಿ ಶಾಸಕ ಸುವರ್ಣ ವಿರೋಧ ಪಕ್ಷದಲ್ಲಿದ್ದಾರೆ. ಅವರು ಮಾತನಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಮಾತನಾಡುತ್ತಾರೆ. ನಾವು ಮಹಿಳೆಯರಿಗೆ ಮರ್ಯಾದೆ ಕೊಡುವ ಸರಕಾರ. ಯಾವುದೇ ಸಮಾಜ,ಯಾರಿಗೆ ಅನ್ಯಾಯವಾದರೂ ನಾವು ಸಹಿಸಲ್ಲ. ನಿಷ್ಪಕ್ಷಪಾತವಾದ ತನಿಖೆ ಮಾಡುತೆತೀವೆ ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version