ಬಿಬಿಎಂಪಿಯಲ್ಲಿ ಕ್ವಾಲಿಟಿ ಕಂಟ್ರೋಲರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಓದಿದ್ದು 9ನೇ ತರಗತಿ!

bbmp fire
14/08/2023

ಬೆಂಗಳೂರು: ಸಾಮಾನ್ಯವಾಗಿ ಬಿಇ ಮಾಡಿರುವ ವ್ಯಕ್ತಿಗಳನ್ನು ಎಂಜಿನಿಯರ್ ಕೆಲಸ ಮಾಡೊದಕ್ಕೆ ಸರ್ಕಾರಗಳು ನೇಮಿಸಿಕೊಳ್ಳುವುದು ವಾಡಿಕೆ. ಆದರೆ ಬಿಬಿಎಂಪಿಯಲ್ಲಿ ಕ್ವಾಲಿಟಿ ಕಂಟ್ರೋಲರ್ ಆಗಿ ಕೇವಲ 9 ನೇ ತರಗತಿ ಓದಿರುವ ವ್ಯಕ್ತಿಯನ್ನು ಪಾಲಿಕೆಯಲ್ಲಿ ಕ್ವಾಲಿಟಿ ಕಂಟ್ರೋಲ್ ಕೆಲಸ ಮಾಡಲು ನೇಮಿಸಿಕೊಂಡಿರುವುದೀಗ ಸುದ್ದಿಗೆ ಗ್ರಾಸವಾಗಿದೆ.

ಪೊಲೀಸರ ತನಿಖೆಯ ವೇಳೆ ಕ್ವಾಲಿಟಿ ಕಂಟ್ರೋಲ್ ಮಾಡುತ್ತಿದ್ದ ಸುರೇಶ್, ಎಇಇ ಆನಂದ್ ಸೇರಿ ಮೂವರನ್ನು ಹಲಸೂರು ಗೇಟ್ ಪೊಲೀಸರು ಕಳೆದ 24 ಗಂಟೆಯಿಂದ ತೀವ್ರ ವಿಚಾರಣೆ ಮಾಡಿದಾಗ ಅಗ್ನಿ ಅವಘಡವಾದಾಗ ಕ್ವಾಲಿಟಿ ಕಂಟ್ರೋಲ್ ಹ್ಯಾಂಡಲ್ ಮಾಡುತ್ತಿದ್ದ ಸುರೇಶ್ ಇತಿಹಾಸ ಬೆಳಕಿಗೆ ಬಂದಿದೆ. ಆತ ಕೆಲಸ ಮಾಡಿದ್ದಕ್ಕೂ ಆತನ ಓದಿಗೂ ವ್ಯತ್ಯಾಸ ಇರುವುದು ವಿಚಾರ ಬೆಳಕಿಗೆ ಬಂದಿದೆ.

ಕಳೆದ 24 ಗಂಟೆಯಿಂದ ಪ್ರಕರಣದ ಎ1 ಆರೋಪಿ ಎಇಇ ಆನಂದ್ , ಎ2 ಆರೋಪಿ ಸ್ವಾಮಿ, ಎ3 ಆರೋಪಿ ಸುರೇಶ್ ನನ್ನ ತೀವ್ರ ವಿಚಾರಣೆ ಮಾಡಿ ಮತ್ತೆ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ಕಳಿಸಿಕೊಡಲಾಗಿದೆ. ಹೆಚ್ಚಿನ ತನಿಖೆಗೆ ಅವಶ್ಯಕತೆ ಇರುವ ಹಿನ್ನೆಲೆ ನೋಟಿಸ್ ಕೊಟ್ಟು ಕಳಿಸಿಕೊಡಲಾಗಿದೆ.

ಇತ್ತೀಚಿನ ಸುದ್ದಿ

Exit mobile version