10:25 PM Wednesday 29 - October 2025

ಪಾವನ ಅಂತ ಹೆಸರಿಟ್ಕೊಂಡು ಪಾಪದ ಕೆಲಸ ಮಾಡಿದ ಪತ್ನಿ: ಪ್ರೇಮಿ ಜೊತೆ ಸೇರಲು ಪತಿಯ ಮರ್ಡರ್!

chikkamagaluru
14/08/2023

ಚಿಕ್ಕಮಗಳೂರು:  ಪ್ರೇಮಿ ಜೊತೆ ಸೇರಲು ಪತ್ನಿಯೊಬ್ಬಳು ಪತಿಯನ್ನೇ ವ್ಯವಸ್ಥಿತವಾಗಿ ಕೊಂದ ಘಟನೆ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.

ಪಾವನ ಅಂತ ಹೆಸರಿಟ್ಕೊಂಡು ಪಾಪದ ಕೆಲಸ ಮಾಡಿದ ಮಡದಿ,  ಗಂಡನಿಗೆ  ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ್ದಳು ಬಳಿಕ  ಪ್ರಜ್ಞೆ ತಪ್ಪಿದ ಪತಿಯನ್ನ ಪ್ರೇಮಿ ಜೊತೆ ಬೈಕಲ್ಲಿ ತಂದು ಕೆರೆಗೆ ಎಸೆದಿದ್ದಾಳೆ.

ನವೀನ್ (28) ಪತ್ನಿ ಕಣ್ಣಾಮುಚ್ಚಾಲೆ ಆಟಕ್ಕೆ ಬಲಿಯಾದ ಪತಿಯಾಗಿದ್ದು, ಆಗಸ್ಟ್ 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಮರ್ಡರ್ ಮಾಡಿರೋದು ಪತ್ನಿಯೇ ಅನ್ನೋದು ಖಾತ್ರಿಯಾಗಿದೆ.

ಪ್ರೇಮಿ ಸಂಜಯ್ ಜೊತೆ ಇರಲು ಅಡ್ಡಗಾಲಾಗುತ್ತಿದ್ದ ಪತಿ ನವೀನ್ ನನ್ನು ಮುಗಿಸಲು ಪಾವನ ಸ್ಕೆಚ್ ಹಾಕಿದ್ದಳು. ಪ್ರೇಮಿ ಸಂಜಯ್ ಜೊತೆ ಸೇರಿ ಪತಿ ನವೀನ್ ಗೆ ಮಂಗಳ ಹಾಡಿದ್ದಳು. ಇದೀಗ ಪೊಲೀಸರ ತನಿಖೆಯಲ್ಲಿ ಪಾವನ-ಸಂಜಯ್ ಎಲ್ಲಾ ಸತ್ಯ ಬಾಯ್ಬಿಟ್ಟಿದ್ದಾರೆ.

ಇತ್ತೀಚಿನ ಸುದ್ದಿ

Exit mobile version