11:02 PM Tuesday 21 - October 2025

ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ: ಅಧಿಕೃತ ಆದೇಶದಲ್ಲೇನಿದೆ?

vidhanasoudha
03/11/2023

ಬೆಂಗಳೂರು: ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿದ್ದು,ಎಸ್.ಡಿ.ಆರ್.ಎಫ್‌ ಅಡಿ ಅನುದಾನ ಬಿಡುಗಡೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

31 ಜಿಲ್ಲೆಗಳಿಗೆ 324 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ (Karnataka Govt) ಘೋಷಣೆ ಮಾಡಿತ್ತು. ಅಲ್ಲದೆ, ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕೆ ಅಂತ 17 ಸಾವಿರ ಕೋಟಿ ರೂ. ಪರಿಹಾರ ಕೇಳಿದೆ. ಈವರೆಗೂ ಕೇಂದ್ರ ಸರ್ಕಾರ ಒಂದೂ ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಅಂತ ಸಿಎಂ ಹಾದಿಯಾಗಿ ಸಚಿವರು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಅಂತ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ಗ್ರಾಮಾಂತರ- 6 ಕೋಟಿ.

ರಾಮನಗರ-7.50 ಕೋಟಿ.

ಕೋಲಾರ – 9 ಕೋಟಿ.

ಚಿಕ್ಕಬಳ್ಳಾಪುರ- 9 ಕೋಟಿ.

ತುಮಕೂರು-15 ಕೋಟಿ.

ಚಿತ್ರದುರ್ಗ- 9 ಕೋಟಿ.

ದಾವಣಗೆರೆ- 9 ಕೋಟಿ.

ಚಾಮರಾಜನಗರ-7.50 ಕೋಟಿ

ಮೈಸೂರು – 13.50 ಕೋಟಿ.

ಮಂಡ್ಯ- 10.50 ಕೋಟಿ.

ಬಳ್ಳಾರಿ- 7.50 ಕೋಟಿ.

ಕೊಪ್ಪಳ- 10.50 ಕೋಟಿ.

ರಾಯಚೂರು- 9 ಕೋಟಿ.

ಕಲಬುರ್ಗಿ- 16.50 ಕೋಟಿ.

ಬೀದರ್- 4.50 ಕೋಟಿ.

ಬೆಳಗಾವಿ- 22.50 ಕೋಟಿ.

ಬಾಗಲಕೋಟೆ- 13.50 ಕೋಟಿ.

ವಿಜಯಪುರ- 18 ಕೋಟಿ.

ಗದಗ-10.50 ಕೋಟಿ.

ಹಾವೇರಿ-12 ಕೋಟಿ.

ಧಾರವಾಡ-12 ಕೋಟಿ.

ಶಿವಮೊಗ್ಗ-10.50 ಕೋಟಿ.

ಹಾಸನ- 12 ಕೋಟಿ.

ಚಿಕ್ಕಮಗಳೂರು-12 ಕೋಟಿ.

ಕೊಡಗು-7.50 ಕೋಟಿ.

ದಕ್ಷಿಣಕನ್ನಡ- 3 ಕೋಟಿ.

ಉಡುಪಿ- 4.50 ಕೋಟಿ.

ಉತ್ತರ ಕನ್ನಡ-16.50 ಕೋಟಿ.

ಯಾದಗಿರಿ-9 ಕೋಟಿ.

ವಿಜಯನಗರ-9 ಕೋಟಿ.

ಇತ್ತೀಚಿನ ಸುದ್ದಿ

Exit mobile version