ನಿಮ್ಮ ಕ್ಷೇತ್ರದ ಸಂಸದರಿಗೆ ತಿಂಗಳಿಗೆ ಎಷ್ಟು ಸ್ಯಾಲರಿ ಸಿಗುತ್ತೆ..? ಬೇರೇನು ಸೌಲಭ್ಯ ಸಿಗುತ್ತದೆ..?

ನಮ್ಮ ದೇಶದಲ್ಲಿ ಸಲ ಸುಮಾರು ಒಂದೂವರೆ ತಿಂಗಳ ಕಾಲ 7 ಹಂತಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಿತು. ರವಿವಾರ ಸಂಜೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಸಚಿವರ ಪ್ರಮಾಣ ವಚನ ಸ್ವೀಕಾರ ಕೂಡಾ ನಡೆಯಿತು.
ಈ ಮಧ್ಯೆ ನಮ್ಮ ಕ್ಷೇತ್ರದ ಸಂಸದರಿಗೆ ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತದೆ? ಅವರಿಗೆ ಸಿಗುವ ವಿಶೇಷ ಭತ್ಯೆಗಳೇನು? ಸೌಲಭ್ಯಗಳೇನು? ಎಂಬುದು ಜನರ ಪ್ರಶ್ನೆಯಾಗಿದೆ. ಭಾರತದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿವೆ. ಲೋಕಸಭಾ ಚುನಾವಣೆಯಲ್ಲಿ 272 ಸ್ಥಾನಗಳಲ್ಲಿ ಗೆಲ್ಲುವ ಪಕ್ಷ ಕೇಂದ್ರದಲ್ಲಿ ಸರ್ಕಾರ ರಚಿಸಲು ಅರ್ಹವಾಗಿರುತ್ತದೆ.
ಪ್ರಧಾನಮಂತ್ರಿಯ ಆಯ್ಕೆಗಾಗಿ ನಾವು ಗೆಲ್ಲಿಸಿ ಕಳುಹಿಸುವ ಸಂಸದರು ದೆಹಲಿಯಲ್ಲಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಲೋಕಸಭೆಯು ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳ ಪ್ರಕ್ರಿಯೆಯ ಮೂಲಕ ಜನರಿಂದ ನೇರವಾಗಿ ಚುನಾಯಿತರಾದ ಪ್ರತಿನಿಧಿಗಳಿಂದ ಕೂಡಿದೆ. ಅದಕ್ಕೂ ಮೊದಲು ಸಂಸತ್ ವಿಸರ್ಜನೆಯಾಗುವುದಿಲ್ಲ. ನಾವು ಆಯ್ಕೆ ಮಾಡಿ ಕಳುಹಿಸುವ ಸಂಸದರ ಸಂಬಳ, ಸವಲತ್ತುಗಳು ಮತ್ತು ಭತ್ಯೆಗಳ ಬಗ್ಗೆ ತಿಳಿದುಕೊಳ್ಳಲು ನಿಮಗೂ ಕುತೂಹಲವಿದ್ದರೆ ಆ ಕುರಿತು ಮಾಹಿತಿ ಇಲ್ಲಿದೆ.
ಸಂಸದರಿಗೆ ಪ್ರತಿ ತಿಂಗಳೂ 1 ಲಕ್ಷ ರೂ. ಸಂಬಳ ಸಿಗುತ್ತದೆ.
ಹೆಚ್ಚುವರಿಯಾಗಿ, ಅವರ ಸಂಬಳವು ಪ್ರತಿ 5 ವರ್ಷಗಳಿಗೊಮ್ಮೆ ದೈನಂದಿನ ಭತ್ಯೆಗಳ ರೂಪದಲ್ಲಿ ಹೆಚ್ಚಾಗುತ್ತದೆ.2010ರ ಸಂಸತ್ ಸದಸ್ಯರ (ತಿದ್ದುಪಡಿ) ಕಾಯ್ದೆ ಪ್ರಕಾರ, ಸಂಸದರ ಸಂಬಳ ತಿಂಗಳಿಗೆ 50,000 ರೂ. ಮೂಲ ವೇತನವನ್ನು ಒಳಗೊಂಡಿರುತ್ತದೆ.
ಸಂಸದರು ಸಂಸತ್ ಅಧಿವೇಶನ ನಡೆಯುವಾಗ ಅಧಿವೇಶನಗಳಿಗೆ ಹಾಜರಾಗಲು ದಿನಕ್ಕೆ 2,000 ರೂ. ಭತ್ಯೆ ನೀಡಲಾಗುತ್ತದೆ.ಸಂಸದರು ರಸ್ತೆ ಮೂಲಕ ಪ್ರಯಾಣಿಸುತ್ತಿದ್ದರೆ ಪ್ರತಿ ಕಿ.ಮೀ.ಗೆ 16 ರೂ.ನಂತೆ ಪ್ರಯಾಣ ಭತ್ಯೆ ಪಡೆಯಬಹುದು.ಸಂಸದರು ತಮ್ಮ ಲೋಕಸಭಾ ಕ್ಷೇತ್ರಗಳಿಗೆ ಖರ್ಚು ಮಾಡಲು ಪ್ರತಿ ತಿಂಗಳಿಗೆ 45,000 ರೂ.ಗಳ ಕ್ಷೇತ್ರ ಭತ್ಯೆಯನ್ನೂ ನೀಡಲಾಗುತ್ತದೆ.
ಇದಿಷ್ಟೇ ಅಲ್ಲದೆ, ಸ್ಥಾಯಿ ಮತ್ತು ಅಂಚೆ ವೆಚ್ಚಕ್ಕೆ 15,000 ಸೇರಿದಂತೆ ತಿಂಗಳಿಗೆ ಕಚೇರಿ ವೆಚ್ಚವಾಗಿ 45,000 ರೂ. ನೀಡಲಾಗುತ್ತದೆ.
ಸಂಸದರಿಗೆ ಸಹಾಯ ಮಾಡಲು ಅಸಿಸ್ಟೆಂಟ್ಗಳು ಬೇಕಾಗುತ್ತಾರೆ. ಹೀಗಾಗಿ, ಕಾರ್ಯದರ್ಶಿ, ಸಹಾಯಕರ ವೇತನ ನೀಡಲು ಭತ್ಯೆ ಬಳಸಿಕೊಳ್ಳಬಹುದು.
ಪ್ರತಿ ತಿಂಗಳು ಸಂಸದರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ ಪಡೆಯಲು 500 ರೂ. ನೀಡಲಾಗುತ್ತದೆ.
ಸಂಸದರು ಸಭೆಗಳಿಗೆ ಹೋಗುವುದು ಸೇರಿದಂತೆ ತಮ್ಮ ಕರ್ತವ್ಯಗಳ ನಿರ್ವಹಣೆಯಲ್ಲಿ ಉಂಟಾದ ವೆಚ್ಚಗಳ ವಿವರ ನೀಡಿದರೆ ಆ ಹಣವನ್ನು ಮರುಪಾವತಿ ಮಾಡಲಾಗುತ್ತದೆ.
ಸಂಸದರಿಗೆ ಅವರ ಅಧಿಕಾರಾವಧಿ ಮುಗಿಯುವವರೆಗೂ ದೆಹಲಿಯಲ್ಲಿ ಬಾಡಿಗೆ ರಹಿತವಾಗಿ ಸರ್ಕಾರದಿಂದಲೇ ಮನೆಯನ್ನು ನೀಡಲಾಗುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth