WWE ಲೆಜೆಂಡ್ ಹಲ್ಕ್ ಹೊಗನ್ ಹೃದಯಾಘಾತದಿಂದ ನಿಧನ

hulk hogan
25/07/2025

Hulk Hogan  Dead at 71 — ಮನರಂಜನಾ ಕುಸ್ತಿ  WWE ಲೆಜೆಂಡ್ ಹಲ್ಕ್ ಹೊಗನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. 71 ವಯಸ್ಸಿನ ಹಲ್ಕ್ ಹೊಗನ್ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಹಲ್ಕ್ ಹೊಗನ್ ಅವರಿಗೆ ಹೃದಯಾಘಾತವಾದ ವೇಳೆ, ಅವರನ್ನು ಆತುರಾತುರವಾಗಿ ಆ್ಯಂಬುಲೆನ್ಸ್ ಮೂಲಕ ಸಾಗಿಸಲು ಹತಾಶ ಪ್ರಯತ್ನ ಮಾಡುತ್ತಿರುವ ದೃಶ್ಯ ಹಲ್ಕ್ ಹೊಗನ್ ಅವರ ನಿವಾಸದ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗುರುವಾರ ಬೆಳಗ್ಗೆ 11:17ರ ಸುಮಾರಿಗೆ ಪತ್ರಿಕಾಗೋಷ್ಠಿಯಲ್ಲಿ ಹಲ್ಕ್ ಹೊಗನ್ ಅವರು ನಿಧನರಾಗಿರುವ ವಿಚಾರವನ್ನು ಬಹಿರಂಗಪಡಿಸಲಾಯಿತು.

ಮೇ ತಿಂಗಳಲ್ಲಿ ರಿಯಲ್ ಅಮೇರಿಕನ್ ಫ್ರೀಸ್ಟೈಲ್ ಹವ್ಯಾಸಿ ಕುಸ್ತಿ ಲೀಗ್ ಸಂದರ್ಭದಲ್ಲಿ ಹಲ್ಕ್ ಹೊಗನ್ ಕೊನೆಯ ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದರು ಎನ್ನಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version