10:52 AM Thursday 16 - October 2025

ಅಪ್ಪನನ್ನು‌ ಮರೆತೆಬಿಟ್ರಂತೆ ರವೀಂದ್ರ ಜಡೇಜಾ: ಹೆಂಡ್ತಿ ಮಾತು ಕೇಳಿ ನನ್ನನ್ನು ದೂರ ಮಾಡಿದ ಎಂದು ಕಣ್ಣೀರಿಟ್ಟ ಖ್ಯಾತ ಕ್ರಿಕೆಟಿಗನ ತಂದೆ

10/02/2024

ಕಳೆದ ಐದು ವರ್ಷಗಳಿಂದ ನನ್ನ ಮಗ ನನ್ನೊಂದಿಗೆ ಮಾತು ಮಾತನಾಡಿಲ್ಲ. ಮದುವೆ ನಂತರ ಮಗ ಸಂಪೂರ್ಣವಾಗಿ ಬದಲಾಗಿದ್ದಾನೆ. ಅವನು ತನ್ನ ಹೆಂಡತಿ ಮಾತನ್ನು ಕೇಳಲು ಪ್ರಾರಂಭಿಸಿದ್ದಾನೆ ಮತ್ತು ನನ್ನೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದಾನೆ . ಇವೆಲ್ಲವನ್ನೂ ನೋಡಿದರೆ ನನ್ನ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡದೇ ಇರುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ ಜಡೇಜಾ ನೋವು ತೋಡಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟು 15 ವರ್ಷ ಪೂರೈಸಿದ ಸಂತಸದಲ್ಲಿದ್ದ ರವೀಂದ್ರ ಜಡೇಜಾರಿಗೆ ತಂದೆಯ ಈ ಆರೋಪ ಭಾರಿ ಮುಜುಗರವನ್ನು ಸೃಷ್ಟಿಸಿದೆ. ಜಡೇಜಾ ಅವರ ಪತ್ನಿ ರಿವಾಬ ಗುಜರಾತ್ ನಲ್ಲಿ ಬಿಜೆಪಿ ಶಾಸಕಿಯಾಗಿದ್ದಾರೆ.

ನನ್ನ ಸೊಸೆ ನನ್ನ ಮನೆ ಒಡೆಯುವ ಕೆಲಸ ಮಾಡಿದ್ದಾಳೆ. ಏನು ಮ್ಯಾಜಿಕ್ ಮಾಡಿದಳೋ ಗೊತ್ತಿಲ್ಲ. ನನ್ನ ಮಗ ನನ್ನಿಂದ ದೂರವಾಗಿ ವರ್ಷಗಳೇ ಕಳೆದಿವೆ ಎಂದು ತಂದೆ ಆರೋಪಿಸಿದ್ದಾರೆ.

ನನ್ನ ಮಗ ಜಡೇಜಾ ನನ್ನೊಂದಿಗೆ ಸಂಪರ್ಕದಲ್ಲಿಲ್ಲ. ಪ್ರಸ್ತುತ ನಾನು ಜಾಮ್ ನಗರದ ಎರಡು ಬಿ ಎಚ್ ಕೆ ಫ್ಲಾಟ್ ನಲ್ಲಿ ಒಬ್ಬನೇ ವಾಸಿಸುತ್ತಿದ್ದೇನೆ. ಒಂದು ಕಾಲದಲ್ಲಿ ನನ್ನ ಮಗ ಕೂಡ ನನ್ನೊಂದಿಗೆ ಒಂದೇ ಫ್ಲಾಟ್ ನಲ್ಲಿ ಇದ್ದ. ಆದರೆ ಈಗ ಈ ಫ್ಲಾಟ್ ನಲ್ಲಿ 20,000 ಪಿಂಚಣಿಯಲ್ಲಿ ನಾನೊಬ್ಬನೇ ಬದುಕುತ್ತಿದ್ದೇನೆ. ರವೀಂದ್ರ ಮದುವೆಯಾದ ಎರಡು ಮೂರು ತಿಂಗಳ ಕಾಲ ಚೆನ್ನಾಗಿಯೇ ಇದ್ದ. ಆದರೆ ನಂತರ ಜಡೇಜಾ ನಡವಳಿಕೆಯಲ್ಲಿ ಬದಲಾವಣೆ ಕಾಣಿಸಿತು. ನನ್ನ ಮಗನ ಮೇಲೆ ಅವನ ಹೆಂಡತಿ ರಿವಾಬ ಏನು ಮ್ಯಾಜಿಕ್ ಮಾಡಿದಳೋ ಗೊತ್ತಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version