ಭಾರತವು ಜಗತ್ತಿಗೆ ಬುದ್ಧನನ್ನು ನೀಡಿದೆಯೇ ಹೊರತು ಯುದ್ಧವನ್ನಲ್ಲ: ಪ್ರಧಾನಿ ಮೋದಿ ಉವಾಚ

ವಿಯೆನ್ನಾದಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ಜಗತ್ತಿಗೆ ‘ಬುದ್ಧ’ ಅನ್ನು ನೀಡಿದೆಯೇ ಹೊರತು ಯುದ್ಧವಲ್ಲ ಎಂದು ಹೇಳಿದ್ದಾರೆ.
21 ನೇ ಶತಮಾನದಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತದ ಆಕಾಂಕ್ಷೆಗಳನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದರು. ದೇಶವು “ಅತ್ಯುತ್ತಮ, ಪ್ರಕಾಶಮಾನವಾದ, ದೊಡ್ಡದನ್ನು ಸಾಧಿಸುವ ಮತ್ತು ಅತ್ಯುನ್ನತ ಮೈಲಿಗಲ್ಲುಗಳನ್ನು ತಲುಪುವ” ಕಡೆಗೆ ಕೆಲಸ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.
ಸಾವಿರಾರು ವರ್ಷಗಳಿಂದ ನಾವು ನಮ್ಮ ಜ್ಞಾನ ಮತ್ತು ಪರಿಣತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ನಾವು ಯುದ್ಧ ನೀಡಲಿಲ್ಲ. ಜಗತ್ತಿಗೆ ಬುದ್ಧ ಕೊಟ್ಟಿದ್ದೇವೆ. ಭಾರತವು ಯಾವಾಗಲೂ ಶಾಂತಿ ಮತ್ತು ಸಮೃದ್ಧಿಯನ್ನು ನೀಡಿದೆ. ಆದ್ದರಿಂದ ಭಾರತವು 21 ನೇ ಶತಮಾನದಲ್ಲಿ ತನ್ನ ಪಾತ್ರವನ್ನು ಬಲಪಡಿಸಲಿದೆ ಎಂದು ಪ್ರಧಾನಿ ಮೋದಿ ಬುಧವಾರ ವಿಯೆನ್ನಾದಲ್ಲಿ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth