ವಂದೇ ಭಾರತ್ ಎಕ್ಸ್‌’ಪ್ರೆಸ್‌ ನಲ್ಲಿ ಪೂರೈಸಲಾದ ಆಹಾರದಲ್ಲಿ ಜಿರಳೆ ಪತ್ತೆ!

cockroach in food
21/06/2024

ವಂದೇ ಭಾರತ್ ಎಕ್ಸ್‌’ಪ್ರೆಸ್‌ ನಲ್ಲಿ ಪೂರೈಸಲಾದ ಆಹಾರದಲ್ಲಿ ಜಿರಳೆ ಪತ್ತೆಯಾಗಿರುವ ಬಗ್ಗೆ ಸಾಮಾಜಿಕ ಜಾಲ ಬಳಕೆದಾರರೊಬ್ಬರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಇದರ ಬೆನ್ನಲ್ಲೇ ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಈ ಬಗ್ಗೆ ಕ್ಷಮೆ ಯಾಚಿಸಿದೆ.

ಭೋಪಾಲ್‌ ನಿಂದ ಆಗ್ರಾಕ್ಕೆ ಓಡುವ ವಂದೇ ಭಾರತ್ ಎಕ್ಸ್‌ ಪ್ರೆಸ್‌ ನಲ್ಲಿ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಪ್ರಯಾಣಿಸಿದ್ದು, ಅವರು ಖರೀದಿಸಿದ ಊಟದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ವಿದಿತ್ ವರ್ಷಿಣಿ ಎಂಬವರು  ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಆಹಾರ ಮಾರಾಟಗಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವರ್ಷಿಣಿ ಅವರ ದೂರಿನ ಬಗ್ಗೆ ಎರಡು ದಿನಗಳ ನಂತರ IRCTC ಪ್ರತಿಕ್ರಿಯಿಸಿದೆ. ಸಂಬಂಧಪಟ್ಟ ಸೇವಾ ಪೂರೈಕೆದಾರರ ಮೇಲೆ ‘ಸೂಕ್ತ ದಂಡ’ ಹಾಕುವುದಾಗಿ ಭರವಸೆ ನೀಡುತ್ತೇವೆ. ಪ್ರಯಾಣದ ವೇಳೆ ನಿಮಗಾದ ಅನುಭವಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ  ಎಂದಿದೆ.

ಜೂನ್ 8 ರಂದು ಕೂಡ ಇಂತಹದ್ದೇ ಘಟನೆ ನಡೆದಿತ್ತು. ತೇಜಸ್ ಎಕ್ಸ್‌ ಪ್ರೆಸ್‌ ನಲ್ಲಿ ಅಹಮದಾಬಾದ್‌ ನಿಂದ ಮುಂಬೈಗೆ ಪ್ರಯಾಣಿಸುವಾಗ ಪ್ರಯಾಣಿಕರೊಬ್ಬರಿಗೆ ಪೂರೈಸಲಾದ ಬಿರಿಯಾನಿಯಲ್ಲಿ ವಯರ್(Wire) ಪತ್ತೆಯಾಗಿತ್ತು. ಇದೀಗ ಊಟದಲ್ಲಿ ಜಿರಳೆ ಪತ್ತೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version